ದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳೆಯರಿಗೆ ಬಂಪರ್ ಉಡುಗೊರೆ ಕೊಟ್ಟಿದ್ದು, ಮಹಿಳೆಯರಿಗಾಗಿ ವಿಶೇಷ ಉಳಿತಾಯ ಪತ್ರ ಘೋಷಣೆ ಮಾಡಿದ್ದಾರೆ.
ಮಹಿಳಾ ಸಮ್ಮಾನ್ ಹೆಸರಿನ ಯೋಜನೆ ಘೋಷಣೆ ಮಾಡಿದ್ದಾರೆ. ಈ ಯೋಜನೆಯಲ್ಲಿ ಶೇಕಡಾ 7.5 ಬಡ್ಡಿಯೊಂದಿಗೆ 2 ಲಕ್ಷದವರೆಗೆ ಠೇವಣಿ ಇಡಬಹುದು. 2 ವರ್ಷದವರೆಗೂ ಶೇಕಡಾ 7.5 ಬಡ್ಡಿ ಸೌಲಭ್ಯವಿದೆ. ಸಾಲದ ಹರಿವು ಸುಗಮ ಮಾಡಲು ಹೊಸ ಯೋಜನೆಯಿದಾಗಿದ್ದು, 2025ರವರೆಗೂ ಈ ಯೋಜನೆ ಜಾರಿಯಲ್ಲಿರಲಿದೆ.