Breaking News

ಆರ್ಥಿಕತೆ ಅಭಿವೃದ್ಧಿಗೆ ಪೂರಕವಾದ ಬಜೆಟ್ – ಶೆಟ್ಟರ್

ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಸಮಗ್ರ ಭಾರತದ ಆರ್ಥಿಕತೆ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಸೂಕ್ಷ್ಮ ನೀರಾವರಿ ಒದಗಿಸುವ ಹಿನ್ನೆಲೆಯಲ್ಲಿ ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5300 ಕೋಟಿ ಹಣದ ನೆರವನ್ನು ಕೇಂದ್ರ ನೀಡಲಿದೆ. 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆಗೆ ಅವಕಾಶ ನೀಡಲಾಗಿದೆ. ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ಆರಂಭಿಸಲಾಗುವುದು. ಏಕಲವ್ಯ ವಸತಿ ಶಾಲೆಗಳಿಗೆ 38 ಸಾವಿರ ಶಿಕ್ಷಕರು, ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಮಹಿಳೆಯರು ಗರಿಷ್ಠ ರೂ. 2 ಲಕ್ಷದವರೆಗೆ ಠೇವಣಿ ಇಡಲು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದಡಿ ಅವಕಾಶವಿದೆ‌. ಒಂದು ಜಿಲ್ಲೆ ಒಂದು ಉತ್ಪನ್ನಕ್ಕೆ ಪ್ರೋತ್ಸಾಹ ನೀಡಲಾಗಿದೆ. ಯುವಕರ ಕೌಶಲ್ಯ ತರಬೇತಿಗಾಗಿ ಪ್ರಧಾನಮಂತ್ರಿ ಕೌಶಲ್ ವಿಕಾಸ ಯೋಜನೆ 4.0 ಪ್ರಾರಂಭಿಸಲಾಗುವುದು. ದೇಖೋ ಅಪ್ನಾ ದೇಶ ಮೂಲಕ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಭಾರತದ ಆರ್ಥಿಕ ಬೆಳವಣಿಗೆಯು ಶೇ.9.2 ಎಂದು ಅಂದಾಜಿಸಲಾಗಿದೆ. ಇದು ಎಲ್ಲಾ ದೊಡ್ಡ ಆರ್ಥಿಕತೆಗಳ ಪೈಕಿ ಅತ್ಯಧಿಕವಾಗಿದೆ. 60 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿಗೆ ಅವಕಾಶ ಕಲ್ಪಿಸಲಾಗಿದೆ. 2022 -23 ರಲ್ಲಿ ರೂ.20 ಸಾವಿರ ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲವನ್ನು 25 ಸಾವಿರ ಕಿ.ಮೀ.ಗೆ ವಿಸ್ತರಿಸಲಾಗುತ್ತದೆ. ನಾಲ್ಕು ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕಗಳನ್ನು ತೆಗೆಯಲಾಗುತ್ತದೆ. ಒಂದು ನಿಲ್ದಾಣ ಒಂದು ಉತ್ಪನ್ನದ ಪರಿಕಲ್ಪನೆಯಡಿ ಸ್ಥಳೀಯ ಸರಕುಗಳಿಗೆ ಆದ್ಯತೆ ನೀಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ 400 ಹೊಸ ಪೀಳಿಗೆಯ ವಂದೇ ಭಾರತ್ ರೈಲುಗಳನ್ನು ತಯಾರಿಸಲಾಗುತ್ತದೆ. 60 ಕಿ.ಮೀ. ಉದ್ದದ 8 ರೋಪ್ ವೇ ಯೋಜನೆಗಳ ಕಾಮಗಾರಿಗೆ ಗುತ್ತಿಗೆ ನೀಡಲಾಗುತ್ತಿದೆ‌. ಗೋಧಿ ಮತ್ತು ಭತ್ತ ಖರೀದಿಗಾಗಿ 1.63 ಕೋಟಿ ರೈತರಿಗೆ ರೂ. 2.37 ಲಕ್ಷ ಕೋಟಿ ನೇರ ಪಾವತಿಗೆ ಅವಕಾಶ ಒದಗಿಸಿದೆ. ದೇಶದಾದ್ಯಂತ ರಾಸಾಯನಿಕ ಮುಕ್ತ ಕೃಷಿಗೆ ಉತ್ತೇಜಿಸಲಾಗುವುದು. ಕಿಸಾನ್ ಡ್ರೋನ್ಸ್ ಮೂಲಕ ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕಗಳು ಮತ್ತು ಪೋಷಕಾಂಶಗಳನ್ನು ಸಿಂಪರಣೆ ಮಾಡಲಾಗುವುದು. ರೂ.1400 ಕೋಟಿ ವೆಚ್ಚದಲ್ಲಿ ಕೆನ್- ಬೆಟ್ವಾ ಜೋಡಣೆ ಯೋಜನೆ ಅನುಷ್ಟಾನಕ್ಕೆ ತಂದು 9.8 ಲಕ್ಷ ಹೆಕ್ಟೇರ್ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಕೌಶಲ್ಯಾಭಿವೃದ್ಧಿ, ಶಿಕ್ಷಣ, ಆರೋಗ್ಯ, ವಸತಿ, ನಗರ ಯೋಜನೆ, ರಫ್ತು ಉತ್ತೇಜನ, ರಕ್ಷಣೆಯಲ್ಲಿ ಆತ್ಮನಿರ್ಭರತೆ, ಕೃತಕ ಬುದ್ಧಿಮತ್ತೆ, ಸೆಮಿ ಕಂಡಕ್ಟರ್, ಬಾಹ್ಯಾಕಾಶ, ಹಸಿರು ಶಕ್ತಿ, ಜೈವಿಕ ಇಂಧನ, ಶಾಖೋತ್ಪನ್ನ ವಿದ್ಯುತ್, ಸೌರ ಶಕ್ತಿ, ಡಿಜಿಟಲ್ ರೂಪಾಯಿ, ಸಹಕಾರ ಸಂಘಗಳು, ಪ್ರವಾಸೋದ್ಯಮ, ಆರ್ ಅಂಡ್ ಡಿ, ಮಹಿಳಾ ಸಬಲೀಕರಣ, ಪಿಂಚಣಿ, ಸ್ಟಾರ್ಟ್ ಅಪ್, ತೆರಿಗೆ ವಿನಾಯಿತಿ ಸೇರಿದಂತೆ ಮಹತ್ತರ ಯೋಜನೆಗಳಿಗೆ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ. ಅಮೃತ ಕಾಲದ ಮೊದಲ ಬಜೆಟ್ ಇದಾಗಿದ್ದು, ಅಭಿವೃದ್ಧಿಗೆ ಬುನಾದಿಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

Share News

About BigTv News

Check Also

ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ..ಮುಖ್ಯಮಂತ್ರಿಗಳನ್ನ ಕೇಂದ್ರ ಸರ್ಕಾರ ರಾಜೀನಾಮೆ ಪಡೆಯಬೇಕು….

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಮಾತನಾಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಮಹಾಜನ್ ವರದಿ 1956 ರಲ್ಲಿ ಅರ್ಜಿ ಸಲ್ಲಿಕೆಯಾಗಿದೆ.ನಾವು ಅದನ್ನ ಒಪ್ಪಿಕೊಂಡಿದ್ದೇವೆ …

Leave a Reply

Your email address will not be published. Required fields are marked *

You cannot copy content of this page