ಹುಬ್ಬಳ್ಳಿ:- ಈಜಲು ಹೋದ ಯುವಕ ನೀರುಪಾಲಾದ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿನ ಗೋಪನಕೊಪ್ಪ ರಸ್ತೆಯಲ್ಲಿರುವ ಎಮ್ಎಸ್ ಎಲ್ ಹಿಂದೆ ನಡೆದಿದೆ. 17 ವರ್ಷದ ಸಾಗರ ದೂಳಪ್ಪನ್ನವರ ನೀರು ಪಾಲಾದ ಯುವಕ.ಇಂದು ಮುಂಜಾನೆ ಬೈಕ್ ತೊಳೆಯಲು ತನ್ನ ಸ್ನೇಹಿರೊಂದಿಗೆ ಕ್ವಾರಿಗೆ ಹೋದ ಸಂದರ್ಭದಲ್ಲಿ ಬೈಕ್ ತೊಳೆದು ನಂತರ ಈಜಲು ಹೋಗಿದ್ದಾನೆ.ಈಜುವ ಸಂದರ್ಭದಲ್ಲಿ ಕ್ವಾರಿ ಮಧ್ಯ ಭಾಗಕ್ಕೆ ಹೋಗಿ ವಾಪಸ್ಸು ಬಾರದೇ ಸಾಗರ ನೀರಿನಲ್ಲಿ ಮುಳುಗಿದ್ದಾನೆ.ಇನ್ನೂ ಸ್ಥಳದಲ್ಲೇ ಇದ್ದವರು ಆತನನ್ನು ರಕ್ಷಣೆ ಮಾಡಲು ಪ್ರಯತ್ನ ಮಾಡಿದರು ಪ್ರಯೋಜನ ಆಗಿಲ್ಲವಂತೆ ,ಇನ್ನೂ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದ ದಳದ ಸಿಬ್ಬಂದಿ ಮತ್ತು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಆಗಮಿಸಿ ಶವವನ್ನು ಹೊರ ತೆಗೆದಿದ್ದಾರೆ.ಇನ್ನೂ ಸ್ಥಳಕ್ಕೆ ಬಂದಿದ್ದ ಯುವಕನ ಪೋಷಕರು ಹಾಗೂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
