ಧಾರವಾಡ: ಸೈಲೆನ್ಸರ್ ಮೂಲಕ ಕರ್ಕಶ ಶಬ್ದ ಮಾಡಿಕೊಂಡು ಓಡಾಡುತ್ತಿದ್ದ ಬೈಕ್‌ಗಳಿಗೆ ಧಾರವಾಡ ಸಂಚಾರ ಠಾಣೆ ಪೊಲೀಸರು ಶಾಕ್ ನೀಡಿದ್ದಾರೆ.
ಸ್ಪೋರ್ಟ್ಸ್ ಸೈಲೆನ್ಸರ್ ಕಾನೂನು ಬಾಹಿರವಾಗಿದೆ. ಆದರೂ ಧಾರವಾಡದಲ್ಲಿ ಅನೇಕರು ಆ ರೀತಿಯ ಸೈಲೆನ್ಸರ್ ಅಳವಡಿಸಿಕೊಂಡು ಕರ್ಕಶ ಶಬ್ದ ಮಾಡುತ್ತ ಓಡಾಡುತ್ತಿದ್ದರು. ಅಂತಹ ನಾಲ್ಕು ಬೈಕ್‌ಗಳನ್ನು ವಶಕ್ಕೆ ಪಡೆದ ಪೊಲೀಸರು ಅವುಗಳನ್ನು ಸೀಜ್ ಮಾಡಿದ್ದಾರೆ.
ಇಂತಹ ಬೈಕ್‌ಗಳ ಓಡಾಟ ಕಂಡು ಬಂದಲ್ಲಿ ಅವುಗಳನ್ನೂ ಸೀಜ್ ಮಾಡಲಾಗುವುದು ಎಂದು ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಮಲ್ಲನಗೌಡ ನಾಯ್ಕ ಖಡಕ್ ಸಂದೇಶ ರವಾನಿಸಿದ್ದಾರೆ.