ಆಮ್ ಆದ್ಮಿ ಪಕ್ಷ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದು, ಮೊದಲ ಪಟ್ಟಿಯನ್ನು ಮಾರ್ಚ್ ನಲ್ಲಿ ಬಿಡುಗಡೆ ಮಾಡಲಾಗುವುದು. ಚುನಾವಣೆ ಹಿನ್ನೆಲೆ ಹಾಗೂ ರಾಜ್ಯದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮಾ.4ರಂದು ನಡೆಯಲಿದೆ. ಕಾರ್ಯಕ್ರಮಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಆಗಮಿಸಲಿದ್ದಾರೆಂದು ಎಂದು ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ರವಿಚಂದ್ರನ್ ನೆರಬೆಂಚಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಪಟ್ಟಿ ಬಿಡುಗಡೆ ಕ್ರೇಜಿವಾಲ್ ನೇತೃತ್ವದಲ್ಲಿ ನಡೆಯಲಿದ್ದು, ದಾವಣಗೆರೆ ಮಧ್ಯೆ ಭಾಗದಲ್ಲಿ ಕಾರ್ಯಕ್ರಮ ನಡೆಯಲಿದೆ ಅಂದಿನಿಂದಲ್ಲೇ ಚುನಾವಣೆ ಯಾತ್ರೆ ಆರಂಭವಾಗಲಿದೆ ಎಂದರು.
ಈ ಬಾರಿಯ ಚುನಾವಣೆಯು ಬಾರಿ ಕುತೂಹಲವಿದ್ದು, ಆಮ್ ಆದ್ಮಿ ಪಕ್ಷವು ಕರ್ನಾಟಕ ರಾಜ್ಯದ ಪ್ರಣಾಳಿಕೆಯನ್ನು ಪಕ್ಷ ದ ಮುಖಂಡರಾದ ಭಾಸ್ಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಸಿದ್ದಗೊಳ್ಳುತ್ತಿದ್ದು, ಈ ಪ್ರಣಾಳಿಕೆ ರಾಜ್ಯವಾರು ಹಾಗೂ ಜಿಲ್ಲಾವಾರು ಆಯಾ ಮಟ್ಟದಲ್ಲಿ ಅನುಗುಣವಾಗಿ ನೀಡಲಾಗುವುದು. ಇದನ್ನು ಪ್ರಣಾಳಿಕೆ ಎನ್ನುವುದಕ್ಕಿಂತ ಗ್ಯಾರಂಟಿ ಕಾರ್ಡ್ ಎಂದು ಸಹಿ ನೀಡಲಾಗುವುದು. ಈ ಪ್ರಣಾಳಿಕೆ ರಾಜ್ಯದ ರೈತರ, ಕಾರ್ಮಿಕರ, ಸರ್ಕಾರಿ ನೌಕರರ, ಮಹಿಳೆಯರ ಹಾಗೂ ಯುವ ಜನರ ಸಂಬಂಧಿಸಿದ ಅಂಶಗಳನ್ನು ಇಟ್ಟುಕೊಂಡು ತಯಾರಿಸಲಾಗುವುದು ಎಂದರು
ಮುಖ್ಯಮಂತ್ರಿ ಚಂದ್ರು ಅವರು ಪ್ರಚಾರ ಸಮಿತಿಯ ನೇತೃತ್ವ ವಹಿಸಿದ್ದಾರೆ. ಮುಂದಿನ ವಾರ ಹುಬ್ಬಳ್ಳಿ ಸೇರಿದಂತೆ ಕರ್ನಾಟಕದಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದರು.
ಇಂದು ಮಂಗಳವಾರ ಸಂಜೆ ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಬ್ಲಾಕ್ ಮಟ್ಟದ ಕಾರ್ಯಕಾರಿಣಿ ಸಭೆ ಹಾಗೂ ನಾಳೆಯಿಂದ ಎರಡು ದಿನ ಬಾಕಿ ವಿಧಾನಸಭಾ ಕ್ಷೇತ್ರಗಳ ಬ್ಲಾಕ್ ಮಟ್ಟದ ಕಾರ್ಯಕಾರಿಣಿ ಸಭೆ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅನಂತ ಕುಮಾರ್ ಬುಗಡಿ, ಪ್ರವೀಣ್ ನಡಕಟ್ಟಿ, ಶಶಿಕುಮಾರ್ ಸುಳ್ಳದ, ಮಲ್ಲಪ್ಪ ತಡಸದ, ಸೇರಿದಂತೆ ಉಪಸ್ಥಿತರಿದ್ದರು.