ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಇದೇ 14ರಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗಮಿಸಲಿದ್ದು, ಅಂದು ವಿವಿಧ ಕಡೆಗಳಲ್ಲಿ ಪಂಚರತ್ನ ಯಾತ್ರೆ ಮೂಲಕ ಸಂಘಟನಾ ಸಭೆ ನಡೆಯಲಿದ್ದಾರೆ ಎಂದು ಜೆಡಿಎಸ್ ಧಾರವಾಡ ಜಿಲ್ಲೆಯ ನಾಯಕರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ
ಜೆಡಿಎಸ್ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಬಿ.ಬಿ.ಗಂಗಾಧರ ಮಠ ಹಾಗೂ ಗುರುರಾಜ ಹುಣಸಿಮರದ, ಫೆಬ್ರವರಿ 14 ರಂದು ಶಿರೂರಿಗೆ ಆಗಮಿಸಿದ್ದು ಅಲ್ಲಿ ಭವ್ಯ ಸ್ವಾಗತ ಸಿಗಲಿದ್ದು, ನಂತರ ನವಲಗುಂದ ತಾಲೂಕಿನ ಶಿರೂರಕ್ಕೆ ಆಗಮಿಸಿ ಬ್ಯಾಲ್ಯಾಳ,ಹನಸಿ, ಶಿರಕೋಳ ಆಗಮಿಸಿ ಮೂಲಕ ಅಳಗವಾಡಿಯಲ್ಲಿ ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ಪುತ್ಥಳಿಗೆ ಮಾಲಾರ್ಪಣೆ ಮಾಡುವರು. ಅಲ್ಲಿಂದ ನವಲಗುಂದದಲ್ಲಿ ಬೃಹತ್ ಸಮಾವೇಶ ಉದ್ಘಾಟನೆ ಮಾಡಿ ಪಕ್ಷದ ಕಾರ್ಯಕರ್ತರನ್ನ ಉದ್ದೇಶಿ ಮಾತನಾಡುವರು ಎಂದರು
ಆರೇಕುರೇಹಟ್ಟಿ, ಯಮನೂರು ಮೂಲಕ ಪಂಚರತ್ನ ಯಾತ್ರೆ ಮೂಲಕ ಹುಬ್ಬಳ್ಳಿ ತಾಲೂಕಿನ ಹೆಬಸೂರು ಗ್ರಾಮದಲ್ಲಿ ವಾಸ್ತವ್ಯ ಮಾಡುವವರು. ಇನ್ನೂ
ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲಿ ರೈತ ಪರ ಕೆಲಸ ಮಾಡಿದ್ದು, ಅವರ ಅನೇಕ ಜನಪರ ಕಾರ್ಯ ಜನತೆ ಮರೆತಿಲ್ಲ. ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದವರು ಬೇರ ಪಕ್ಷಕ್ಕೆ ಸೇರ್ಪಡೆಯಾದರು ಜೆಡಿಎಸ್ ಸಂಘಟನೆ ಬಲಾಢ್ಯವಾಗಿದೆ. ನವಲಗುಂದ ಸೇರಿದಂತೆ ಜಿಲ್ಲೆಯ ಯಾವುದೇ ಕ್ಷೇತ್ರದ ಯಾರಿಗೆ ಟಿಕೇಟ್ ನೀಡಿದರೆ ಒಗ್ಗಟ್ಟಿನಿಂದ ಶ್ರಮ ವಹಿಸಿ ದುಡಿಯುತ್ತೇವೆ ಮತ್ತು ಕುಮಾರಸ್ವಾಮಿ ಅವರ ಸೂಚಿಸಿದ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.