ಹುಬ್ಬಳ್ಳಿ: ಆಶ್ರಯ ಯೋಜನೆಯಲ್ಲಿ ಹಂಚಿಕೆಯಾದಂತಹ ಮೂಲ ಫಲಾನುಭವಿಗಳನ್ನು ಮನೆಗಳನ್ನು ರದ್ದು ಮಾಡಿ, ಶಾಸಕ ಅರವಿಂದ ಬೆಲ್ಲದ ಅವರು ತಮಗೆ ಬೇಕಾದವರಿಗೆ ಮತ್ತು ತಮ್ಮ ಹಿತೈಷಿಗಳಿಗೆ, ತಮ್ಮ ಹಿಂಬಾಲಕರಿಗೆ
ಮನೆಗಳನ್ನು ಮರು ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಮಾಡುತ್ತಿರುವುದನ್ನು ವಿರೋಧಿಸಿ ಧಾರವಾಡ ಜಿಲ್ಲಾ ಆಶ್ರಯ ಮನರ ಬಡಾವಣೆಗಳ ವಿವಿಧ ಸಂಘ ಸಂಸ್ಥೆಗಳ ಒಕ್ಕೂಟದಿಂದ ಇಂದು ಪಾಲಿಕೆ ಎದುರಿಗೆ ಶಾಸಕ ಅರವಿಂದ ಬೆಲ್ಲದ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ಮಾಡಿದರು.
ಇನ್ನು 300 ಕ್ಕೂ ಹೆಚ್ಚು ಆಶ್ರಯ ಮನೆ ಫಲಾನುಭವಿಗಳು ಬೀದಿಗೆ ಬಿಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮಹಾನಗರ ಪಾಲಿಕೆ ಆಯುಕ್ತರು ಇತ್ತ ಗಮನ ಹರಿಸಿ ಬಡವರಿಗೆ ಆಶ್ರಯ ಮನೆ ಒದಗಿಸಬೇಕಿದೆ. ಈ ಅನ್ಯಾಯ ಹೀಗೆ ಮುಂದು ವರೆಯುತ್ತಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಿದೆ ಎಂದು ಎಚ್ಚರಿಕೆಯ ಸಂದೇಶ ನೀಡಿದರು.