Breaking News

ಬಮ್ಮಾಪುರ ಚಿತ್ರಗಾರ ಓಣಿಯಲ್ಲಿರುವ ಈಶ್ವರ ದೇವಸ್ಥಾನದ ಶತಮಾನೋತ್ಸವ

ಹುಬ್ಬಳ್ಳಿ: ಇಲ್ಲಿನ ಬಮ್ಮಾಪುರ ಚಿತ್ರಗಾರ ಓಣಿಯಲ್ಲಿರುವ ಈಶ್ವರ ದೇವಸ್ಥಾನದ ಶತಮಾನೋತ್ಸವ್ ನಿಮಿತ್ತ ಫೆ. 16 ರಿಂದ ಫೆ.22ರ ವರೆಗೆ ವಿವಿಧ ಕಾರ್ಯಕ್ರಮ ಹಾಗೂ ಧರ್ಮ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಗೌರವಾಧ್ಯಕ್ಷ ಪ್ರಕಾಶ ಬೆಂಡಿಗೇರಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಈಶ್ವರ ದೇವಸ್ಥಾನಪ್ಪ 22-08-1988 ರಂದು ಶ್ರೀ ಸದ್ಗುರು ಸಿದ್ದಾರೂಢ ಸ್ವಾಮಿಗಳ ಅಮೃತ ಹಸ್ತದಿಂದ ಸ್ಥಾಪಿಸಲ್ಪಟ ಈಗ 100 ವರ್ಷ ಪೂರ್ಣಗೊಂಡಿ ದ್ದರಿಂದ ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿದ್ದೇವೆ. ತದ ನಿಮಿತ್ತ ಜನ ಜಾಗೃತಿ ಧರ್ಮ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಫೆ.16 ರಂದು ಬೆಳಿಗ್ಗೆ 7-00 ಘಂಟೆಗೆ ಶ್ರೀ ಈಶ್ವರ ದೇವರಿಗೆ ಮಹಾ ರುದ್ರಾಭಿಷೇಕ ನಡೆಯಲಿದ್ದು, 8:00 ಗಂಟೆಗೆ ಸದ್ಗುರು ಸಿದ್ಧಾರೂಢ ಸ್ವಾಮಿಗಳವರ ಮಠದ ಕೈಲಾಸ ಮಂಟಪದಿಂದ 108 ಪೂರ್ಣ ಕುಂಭದೊಂದಿಗೆ ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿ, ಶ್ರೀ ಸದ್ಗುರು ಗುರುನಾಧಾರೂಢ ಸ್ವಾಮಿಗಳ ಹಾಗೂ ಶ್ರೀ ಈಶ್ವರ ದೇವರ ಆನೆ ಅಂಬಾರಿ, ಪಲ್ಲಕ್ಕಿ ಉತ್ಸವ, ಸಕಲ ವಾದ್ಯ ಮೇಳದೊಂದಿಗೆ ಹೊರಟು ಬಮ್ಮಾಪೂರ ಓಣಿಯ, ಶ್ರೀ ಈಶ್ವರ ದೇವಸ್ಥಾನದ ವರೆಗೆ ತಲಪುವುದು,

ಮೆರವಣಿಗೆ ಉದ್ಘಾಟನೆ ಜಿಲ್ಲಾ ಸತ್ರ ನ್ಯಾಯಾಧೀಶೆ ಜೆ.ಶಾಂತಿ ನೇರವೇರಿಸಲಿದ್ದಾರೆ. ಐರಣಿ ಶ್ರೀ ಸದ್ಗುರು ಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಮಠದ ಟ್ರಸ್ಟ್ ಸಮಿತಿ ಸದಸ್ಯರು ಪಾಲ್ಗೊಳಲಿದ್ದಾರೆ.

ಸಂಜೆ 4:30 ಗಂಟೆಗೆ ದೇವಸ್ಥಾನದ ಬಳಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಅತಿಥಿಗಳಾಗಿ ಶಾಸಕ ಪ್ರಸಾದ ಅಬ್ಬಯ್ಯ ಪಾಲ್ಗೊಳ್ಳಲಿದ್ದಾರೆ.
ಫೆ. 17 ರಂದು ಬೆಳಿಗ್ಗೆ 7:00 ಗಂಟೆಗೆ ಈಶ್ವರ ದೇವರಿಗೆ ರುದ್ರಾಭಿಷೇಕ, ಸಂಜೆ 4:30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.‌

ಮಣಕವಾಡ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಪಾಲ್ಗೊಳ್ಳಲಿದ್ದಾರೆ. ‌ನಂತರ ಪ್ರಸಾದ ಸೇವೆ ನಡೆಯಲಿದೆ.
18 ರಂದು ಬೆಳಿಗ್ಗೆ 7:00 ಗಂಟೆಗೆ ದೇವರಿಗೆ ರುದ್ರಾಭಿಷೇಕ, ಮಧ್ಯಾಹ್ನ 1:00 ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಪ್ರಸಾದ ಸೇವೆ ನಡೆಯಲಿದೆ. ಸಂಜೆ 4:30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಶಿರಕೋಳ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪಾಲ್ಗೊಳ್ಳಲಿದ್ದಾರೆ. ಉಮೇಶ ಪಾಚಂಗೆ ಹಾಗೂ ಸಂಗಡಿರಿಂದ ವಾರ್ಕರಿ ಕೀರ್ತನೆ ನಡೆಸಿ ಕೊಡಲಿದ್ದಾರೆ.
ಫೆ.19 ರಂದು ಬೆಳಿಗ್ಗೆ 7:00 ದೇವರಿಗೆ ರುದ್ರಾಭಿಷೇಕ ನಡೆಯಲಿದೆ. ಸಂಜೆ 4:30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪಂಚಗ್ರಹ ಹಿರೇಮಠ ಸುಳದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಪಾಲ್ಗೊಳ್ಳಲಿದ್ದಾರೆ.
20 ರಂದು ಮಹಾ ಶಿವರಾತ್ರಿ ಅಮವಾಸ್ಯೆ ಬೆಳಿಗ್ಗೆ 7:00 ಗಂಟೆಗೆ ಎಸ್ ಎಕೆ ಸಮಾಜದಿಂದ ದೇವರಿಗೆ ಮಹಾರುದ್ರಾಭಿಷೇಕ ನಡೆಯಲಿದೆ. ಅಮ್ಮಿನಭಾವಿ ಶ್ರಿ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶಿರ್ವಚನ ನೀಡಲಿದ್ದಾರೆ. ಅತಿಥಿಗಳಾಗಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಪಾಲ್ಗೊಳ್ಳಲಿದ್ದಾರೆ.
21 ರಂದು ಬೆಳಿಗ್ಗೆ 7:00 ದೇವರಿಗೆ ರುದ್ರಾಭಿಷೇಕ ನಡೆಯಲಿದೆ.

ಸಂಜೆ 4:30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸೂಡಿ ಶ್ರೀ ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ಹಾಗೂ ಪ್ರವಚನ ನೀಡಲಿದ್ದಾರೆ. ಅತಿಥಿಗಳಾಗಿ ಡಾ.ವಿಜಯ ಸಂಕೇಶ್ವರ, ಕೆ ಎಲ್ಇ ಸಂಸ್ಥೆ ಶಂಕರಣ್ಞ ಮುನವಳ್ಳಿ ಪಾಲ್ಗೊಳ್ಳಲಿದ್ದಾರೆ. ‌
ಫೆ. 22 ರಂದು ಬೆಳಿಗ್ಗೆ 7:00 ದೇವರಿಗೆ ರುದ್ರಾಭಿಷೇಕ, 8:00 ಗಂಟೆಗೆ ಮಹಾರುದ್ರ ಹೋಮ, ಮಧ್ಯಾಹ್ನ 12:30 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4:30 ಗಂಟೆಗೆ ಸದ್ಗುರು ಶ್ರೀ ಸಿದ್ದಾರೂಢಸ್ವಾಮಿ ಹಾಗೂ ಗುರುನಾಥರೂಢ ಸ್ವಾಮಿಗಳ ಹಾಗೂ ಈಶ್ವರ ದೇವರ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ವಿವಿಧ ವಾಧ್ಯಮೇಳದೊಂದಿಗೆ ನಡೆಯಲಿದೆ. ‌ಸಂಜೆ 7:00 ಗಂಟೆಗೆ ಶತಮಾನೋತ್ಸವ ಸಮಾರಂಭದ ಸಮಾರೋಪ ನಡೆಯಲಿದ್ದು ಮೂರುಸಾವಿರಮಠದ ಜಗದ್ಗುರು ಶ್ರಿ ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.

Share News

About admin

Check Also

ಹುಬ್ಬಳ್ಳಿ-ಧಾರವಾಡದಲ್ಲಿ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ

ಧಾರವಾಡ : ಹು-ಧಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಮಾರ್ಗದರ್ಶನದಲ್ಲಿ ಆಯುಕ್ತ ಡಾ: ಸಂತೋಷಕುಮಾರ ಬಿರಾದಾರ ಅವರು …

Leave a Reply

Your email address will not be published. Required fields are marked *

You cannot copy content of this page