Breaking News

ಶೈಕ್ಷಣಿಕ ವರ್ಷ ಮುಗಿಯುತ್ತ ಬಂದರೂ ಸಿಕ್ಕಿಲ್ಲ ಸೈಕಲ್: ವಿದ್ಯಾರ್ಥಿಗಳ ಆಸೆ ಆಯ್ತು ನಿರಾಸೆ…!

ಹುಬ್ಬಳ್ಳಿ: ಅದು ಶೈಕ್ಷಣಿಕ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯನ್ನುಂಟು ಮಾಡಿದ್ದ ಯೋಜನೆ. ಈ ಯೋಜನೆಯಿಂದ ಪ್ರಾಥಮಿಕ ಶಿಕ್ಷಣಕ್ಕೆ ಮೊಟಕುಗೊಳಿಸುತ್ತಿದ್ದವರು ಪ್ರೌಢ ಶಿಕ್ಷಣಕ್ಕೂ ಬಂದಿದ್ದರು. ಈ ಯೋಜನೆ ಲಾಭ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ವಿದ್ಯಾರ್ಥಿಗಳ ಜೀವನಕ್ಕೆ ಬಹುದೊಡ್ಡ ಆಸರೆಯಾಗಿತ್ತು. ಆದರೆ ಆ ಯೋಜನೆ ಲಾಭ ಮಾತ್ರ ಈಗ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಅಷ್ಟಕ್ಕೂ ಏನಿದು ಯೋಜನೆ

ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣದ ಮಹತ್ವವನ್ನು ಪರಿಚಯಿಸುವ ಸದುದ್ದೇಶದಿಂದ ಉಚಿತ ಸೈಕಲ್ ವಿತರಣೆ ಮಾಡುತ್ತಿದ್ದ ಸರ್ಕಾರ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಸೈಕಲ್ ವಿತರಣೆ ಮಾತ್ರ ಮಾಡಿಲ್ಲ. ಪ್ರಸ್ತುತ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಿಸುವ ಭರವಸೆ ನೀಡಿದ್ದ ಬೊಮ್ಮಾಯಿ ಸರ್ಕಾರ. ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಸಹ ಇನ್ನೂ ಸೈಕಲ್ ನೀಡಿಲ್ಲ. ಇದರಿಂದ ವಿದ್ಯಾರ್ಥಿಗಳು ಸೈಕಲಗಾಗಿ ಕಾಯುವಂತಾಗಿದೆ‌. 2006-07 ರ ಶೈಕ್ಷಣಿಕ ವರ್ಷದಲ್ಲಿ ಉಚಿತ ಬೈಸಿಕಲ್ ಯೋಜನೆ ರಾಜ್ಯ ಸರ್ಕಾರ ಆರಂಭಿಸಿತ್ತು. ಮಕ್ಕಳ ಶೈಕ್ಷಣಿಕ ಹಕ್ಕು ಎತ್ತಿ ಹಿಡಿಯುವದರ ಜೊತೆಗೆ ಸಾರಿಗೆ ಸೌಲಭ್ಯ ಒದಗಿಸುವ ಮಹತ್ತರ ಯೋಜನೆ ಇದ್ದಾಗಿತ್ತು. ಆದರೆ 2019 ರಲ್ಲಿ ಸಾಂಕ್ರಾಮಿಕ ರೋಗ ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ಯೋಜನೆ ಮರಳಿ ಇನ್ನೂ ಪ್ರಾರಂಭವಾಗಿಲ್ಲ. ಉಚಿತ ಬೈಸಿಕಲ್ ಯೋಜನೆ ಸಾರ್ವಜನಿಕ ಶಿಕ್ಷಣ ಇಲಾಖೆ ಆರಂಭಿಸಿದಾಗ ಶಾಲಾ ದಾಖಲಾತಿ ಸಹ ಹೆಚ್ಚಳವಾಗಿತ್ತು. ಇದು ಪ್ರತಿಯೊಂದು ಮಗುವಿಗೂ ಶಿಕ್ಷಣ ನೀಡುವ ಸರ್ಕಾರದ ಆಶೆಯಕ್ಕೂ ಸಹ ಪೂರಕವಾಗಿತ್ತು. ಆದ್ರೆ ಇಂತಹ ಮಹತ್ತರ ಯೋಜನೆಯನ್ನ ಬೇಜವಾಬ್ದಾರಿಯಿಂದ ಬಸವರಾಜ್ ಬೊಮ್ಮಾಯಿ ಸರ್ಕಾರ ಮರೆತು ಬಿಟ್ಟಿದೆ.

ಇನ್ನೂ ರಾಜ್ಯದಲ್ಲಿ ಬಹುತೇಕ ಸಣ್ಣ ಗ್ರಾಮ, ಗುಡ್ಡಗಾಡು ಪ್ರದೇಶ, ಕಾಡಂಚಿನ ಪ್ರದೇಶಗಳಿಗೆ ಸರಿಯಾದ ಸಾರಿಗೆ ಸೌಲಭ್ಯ ಹಾಗೂ ವಾಹನ ಸಂಚಾರವೂ ಇಲ್ಲ. ಕೊರೋನ ಬಳಿಕ ಆದಾಯವಿಲ್ಲದ ಕಾರಣಕ್ಕೆ ಬಹುತೇಕ ಗ್ರಾಮಗಳಿಗೆ ಸಾರಿಗೆ ಸೌಲಭ್ಯವೇ ಸ್ಥಗಿತವಾಗಿದೆ. ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ನಗರ ಹಾಗೂ ಪಟ್ಟಣದಂತಹ ಪ್ರದೇಶಕ್ಕೆ ಹೋಗುವ ಅನಿವಾರ್ಯತೆ ಇದೆ. ಸರ್ಕಾರ ಉಚಿತ ಸೈಕಲ್ ಯೋಜನೆ ಆರಂಭಿಸಿದಾಗ ಮಕ್ಕಳ ಸಮಸ್ಯೆಗೆ ಪರಿಹಾರ ದೊರಕಿತ್ತು. ಉಚಿತ ಸೈಕಲ್ ಯೋಜನೆ ಇನ್ನೂ ಆರಂಭವಾಗದ ಕಾರಣ ಸಾರಿಗೆ ವಂಚಿತ ಗ್ರಾಮಗಳ ಮಕ್ಕಳಿಗೆ ಕಾಲ್ನಡಿಗೆಯೇ ಗತಿಯಾಗಿದೆ‌. ಶಿಕ್ಷಣ ಪಡೆಯಬೇಕೆಂಬ ಆಸಕ್ತ ವಿದ್ಯಾರ್ಥಿಗಳು ನಿತ್ಯ 5-10 ಕಿಮೀ ನಡೆದುಕೊಂಡು ಶಾಲೆಗೆ ತೆರಳುತ್ತಿದ್ದಾರೆ. ಆದರೆ ಬಹುತೇಕ ವಿದ್ಯಾರ್ಥಿಗಳು ಕಷ್ಟವೇ ಬೇಡವೆಂದು ಶಾಲೆಗಳತ್ತ ಮುಖ ಮಾಡುತ್ತಿಲ್ಲ.

ಒಟ್ಟಿನಲ್ಲಿ ಒಬ್ಬ ವಿದ್ಯಾರ್ಥಿಯ ಕಲಿಕಾ ಅವಧಿ ಮುಗಿದ ಬಳಿಕ ಅವರ ಕುಟುಂಬದ ಇನ್ನೂಳಿದ ವಿದ್ಯಾರ್ಥಿಗಳಿಗೆ ಅದು ಸದುಪಯೋಗವಾಗಿತ್ತು. ಆದ್ರೆ ಶಿಕ್ಷಣ ಇಲಾಖೆ ಮಾತ್ರ ಈ ಯೋಜನೆಯನ್ನೇ ನೆನಪು ಹಾರಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಿಂದಲೂ ಶಾಲಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಗಳ ವೇದಿಕೆ, ಕರ್ನಾಟಕ ಸರ್ಕಾರ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಸರ್ಕಾರಕ್ಕೆ ಉಚಿತ ಬೈಸಿಕಲ್ ಯೋಜನೆ ಆರಂಭಿಸಲು ಮನವಿ ಸಲ್ಲಿಸಿವೆ. ಆದ್ರೆ ಸರ್ಕಾರ ಮಾತ್ರ ಇದಕ್ಕೆ ಸ್ಪಂದಿಸಿಲ್ಲ

Share News

About BigTv News

Check Also

Featured Video Play Icon

ಕಾರ್ಪೋರೆಟರ್ ಮಗಳ ಭೀಕರ ಕೊಲೆ:ಬಿವ್ಹಿಬಿ ಕ್ಯಾಂಪಸ್ ನಲ್ಲಿ ಕೊಲೆ ಮಾಡಿ ಪರಾರಿಯಾದ ದುಷ್ಕರ್ಮಿ..!

ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಮಗಳನ್ನು ಮನಬಂದಂತೆ ಚಾಕು ಇರಿದು ಕೊಲೆಗೈದ ಘಟನೆ ನಗರದ ಪ್ರತಿಷ್ಟಿತ ಬಿವಿಬಿ ಕಾಲೇಜು ಕ್ಯಾಂಪಸ್‌ ನಲ್ಲಿ ನಡೆದಿದೆ.ನೇಹಾ …

Leave a Reply

Your email address will not be published. Required fields are marked *

You cannot copy content of this page