ಹುಬ್ಬಳ್ಳಿ: ನಗರದಲ್ಲಿಂದು ಸಂಚಾರಿ ಪೊಲೀಸರು ಫೀಲ್ಡ್ ಗೆ ಇಳಿದಿದ್ದು, ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ನಿಗದಿತ ಪ್ರಯಾಣಿಕರಿಗಿಂತ ಅಧಿಕ ಪ್ರಮಾಣದ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ 10ಕ್ಕೂ ಆಟೋಗಳನ್ನು ಹುಬ್ಬಳ್ಳಿಯ ಉತ್ತರ ಸಂಚಾರಿ ಠಾಣೆಯ ಪೊಲೀಸರು ಸೀಜ್ ಮಾಡಿದ್ದಾರೆ.
ಒಂದು ಆಟೋದಲ್ಲಿ ಮೂರು ಜನರಿಗೆ ಪ್ರಯಾಣ ಮಾಡಲು ಸ್ಥಳಾವಕಾಶ ಇದ್ದರು ಕೂಡಾ ಕೆಲವೊಂದಿಷ್ಟು ಅಟೋ ಚಾಲಕರು 10ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಶಾಲೆಗೆ ಬಿಡಲು ಹಾಗೂ ಕರೆತರುವ ಕಾರ್ಯವನ್ನು ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಆಟೋ ಚಾಲಕರಿಗೆ ಸಾಕಷ್ಟು ಬಾರಿ ಈ ರೀತಿಯಾಗಿ ಸಂಚಾರಿ ನಿಯಮ ಉಲ್ಲಂಘನೆ ಮಾಡಬೇಡಿ ಅಂತಾ ತಿಳಿ ಹೇಳಿದರು ಕೂಡಾ ಕೆಲವೊಂದಿಷ್ಟು ಅಟೋ ಚಾಲಕರು ಕ್ಯಾರೇ ಎಂದಿಲ್ಲ.
ಹೀಗಾಗಿ ಇಂದು ಬೆಳ್ಳಂಬೆಳ್ಳಿಗೆ ಹುಬ್ಬಳ್ಳಿಯ ಉತ್ತರ ಸಂಚಾರಿ ಠಾಣೆಯ ಪೊಲೀಸರು ಫೀಲ್ಡ್ ಗೆ ಇಳಿದು ವಿದ್ಯಾ ನಗರ,ಗೋಕುಲ್ ರಸ್ತೆ ಹಾಗೂ ದೇಶಪಾಂಡೆ ನಗರದಲ್ಲಿನ ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಇಳಿಸಲು ಬಂದಿದ್ದ 10ಕ್ಕೂ ಹೆಚ್ಚು ಆಟೋಗಳನ್ನು ಸೀಜ್ ಮಾಡಿದ್ದಾರೆ.
ಇನ್ನು, ಕೇವಲ ಆಟೋ ಚಾಲಕರ ತಪ್ಪು ಮಾತ್ರ ಇದರಲಿಲ್ಲ. ಆಟೋಗಳಲ್ಲಿ ತಮ್ಮ ಮಕ್ಕಳನ್ನು ಕಳಿಸುವ ಪೋಷಕರು ಕೂಡಾ ದುಡ್ಡನ್ನು ಉಳಿಸುವ ಸಲುವಾಗಿ ತಮ್ಮ ಮಕ್ಕಳ ಜೀವದ ಜೊತೆ ಆಟ ಆಡುವ ಕೆಲಸಕ್ಕೆ ಮುಂದಾಗುತ್ತಿದ್ದಾರಾ? ಅಂತಾ ಹಲವು ಅನುಮಾನಗಳು ಇದೀಗ ಮೂಡಿದೆ.