ಕುಂದಗೋಳ : ತಾಲೂಕಿನ ಕುಬಿಹಾಳ ಗ್ರಾಮದ ಬೆಣ್ಣೆ ಹಳ್ಳದ ಬಳಿ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಬ್ರಿಡ್ಜ್ ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರನಿಗೆ ಗಂಭೀರವಾಗಿ ಗಾಯವಾಗಿದೆ. ಹಿಂಬದಿಯಲ್ಲಿ ಕುಳಿತ ಸವಾರ ಸಾವನ್ನಪ್ಪಿದ್ದಾನೆ.
ಕಳೆದ ಎರಡು ದಿನಗಳ ಹಿಂದೆ ಅರಳಿಕಟ್ಟಿ ಗ್ರಾಮದಿಂದ ಹುಲಗೂರ ದರ್ಗಾಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್ ಸವಾರ ನಿಯಂತ್ರಣ ತಪ್ಪಿ ಹಳ್ಳದ ಬ್ರಿಡ್ಜ್ ಗೆ ಗುದ್ದಿದ ಪರಿಣಾಮ ,ಬೈಕ್’ನಲ್ಲಿದ್ದ ಇಬ್ಬರು ಸವಾರರು ಗಾಯಗೊಂಡಿದ್ದರು.
ಅರಳಿಕಟ್ಟಿ ಗ್ರಾಮದ 20 ವರ್ಷದ ಮೌಲಾಸಾಬ ಬೂದಿಹಾಳ ಮತ್ತು 19 ವರ್ಷದ ಹಾಜಿಮಲಂಗ ಅಕ್ಕಿ ಗಾಯಾಳುಗಳಾಗಿದ್ದು, ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಮೌಲಾಸಾಬ ಬೂದಿಹಾಳ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.