ಹುಬ್ಬಳ್ಳಿ: ನಗರದ ನವನಗರ ಹತ್ತಿರ ಬೈಕ್ ಸವಾರನೊಬ್ಬ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದ್ದು, ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನವನಗರದ ಕ್ಯಾನ್ಸರ್ ಆಸ್ಪತ್ರೆ ಹತ್ತಿರ ಬೈಕ್ ಮೇಲೆ ಹೋಗುತ್ತಿರುವಾಗ ಅಡ್ಡ ಬಂದ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪರಶುರಾಮ್ ವಾಲಿಕಾರ ( ಜಪಾನ್ ) ಅನ್ನೋ ಯುವಕನ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಭೀಕರ ಅಪಘಾತ ಸೆರೆಯಾಗಿದೆ.ಘಟನೆ ಕುರಿತಂತೆ ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.