ಹುಬ್ಬಳ್ಳಿ: ೮೭ ನೇ ತ್ರಿಮೂರ್ತಿ ಮಹಾಶಿವರಾತ್ರಿ ಮಹೋತ್ಸವ ಪ್ರಯುಕ್ತ ಜ್ಯೋತಿರ್ಲಿಂಗ ಶಿವರಥಯಾತ್ರೆಯ ಉದ್ಘಾಟನಾ ಕಾರ್ಯಕ್ರಮವನ್ನು ಫೆ. ೧೮ ರಂದು ಬೆ. ೯ ಗಂಟೆಗೆ ನಗರದ ಗಾಮನಗಟ್ಟಿ ಹಾಗೂ ಭೈರಿದೇವರಕೊಪ್ಪದ ರಸ್ತೆಯ ಭಗವದ್ಗೀತಾ ಜ್ಞಾನಲೋಕದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಕುಮಾರೀಸ್ ಸಂಚಾಲಕರಾದ ಬ್ರ.ಕು. ನಿರ್ಮಲಾ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಹಾಶಿವರಾತ್ರಿ ಪ್ರಯುಕ್ತ ಈಶ್ವರಿಯ ವಿಶ್ವ ವಿದ್ಯಾಲಯದ ೧೯೫ ಕಾರುಗಳ ಶಿವರಥಯಾತ್ರೆ ಹಾಗೂ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮತ್ತು ಶಿವಸಂದೇಶ ವೃಷ್ಟಿ ಹಮ್ಮಿಕೊಳ್ಳಲಾಗಿದೆ ಎಂದರು.
ಶಿವರಥಯಾತ್ರೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಲಿದ್ದು, ಶಿವಧ್ಚಜಾರೋಹಣವನ್ನು ವಿ.ಪ
ಸಭಾಪತಿ ಬಸವರಾಜ್ ಹೊರಟ್ಟಿ ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುಂಬಯಿಯ ಆದರಣೀಯ ಬ್ರಹ್ಮಕುಮಾರಿ ರಾಜಯೋಗಿನಿ ಮೀರಾಬೆಹನ್ ಜಿ, ಮುಖ್ಯ ಅತಿಥಿಗಳಾಗಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ಗೌರವ ಅತಿಥಿಗಳಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ್, ಪ್ರಸಾದ್ ಅಬ್ಬಯ್ಯ, ಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ಉಪಮೇಯರ್ ಉಮಾ ಮುಕುಂದ, ಹು-ಧಾ ಪೊಲೀಸ್ ಕಮೀಷನರ್ ರಮಣ ಗುಪ್ತಾ, ಪಾಲಿಕೆ ಆಯುಕ್ತರಾದ ಡಾ. ಗೋಪಾಲಕೃಷ್ಣ ಸೇರಿದಂತೆ ಮುಂತಾದ ಗಣ್ಯರು ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕುಮಾರಿಗಳಾದ ವಿಜಯಾ, ಶರಣಮ್ಮಾ, ಚೆನ್ನಮ್ಮಾ, ಭಾಗ್ಯ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news




