ಸಿಎಂ ಬಸವರಾಜ ಬೊಮ್ಮಾಯಿಯವರು ಬಜೆಟ್ ಮಂಡಿಸುವ ವೇಳೆ ಕಿವಿ ಮೇಲೆ ಹೂಯಿಟ್ಟುಕೊಂಡು ಘೋಷಿಸಿದ ಬಜೆಟ್ ಬಗ್ಗೆ ಕಾಂಗ್ರೆಸ್ ನಾಯಕರುಗಳು ವ್ಯಂಗ್ಯವಾಡಿದ್ದರು. ಈಗ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನಿಂದ ʼಸಾಕಪ್ಪ ಸಾಕು ಕಿವಿ ಮೇಲೆ ಹೂ ಎಂಬ ಅಭಿಯಾನʼ ಆರಂಭವಾಗಿದೆ. ಪೇ ಸಿಎಂ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ ವಿಭಿನ್ನ ಅಭಿಯಾನವನ್ನು ಕಾಂಗ್ರೆಸ್ ಪ್ರಾರಂಭ ಮಾಡಿದ್ದು, ಬಿಜೆಪಿ ಈಗಾಗಲೇ ಅಂಟಿಸಿರುವ ಬಿಜೆಪಿಯೇ ಭರವಸೆಯಿಂದ ಪೋಸ್ಟರ್ ಗಳ ಮೇಲೆ ಸಾಕಪ್ಪ ಸಾಕು ಕಿವಿ ಮೇಲೆ ಹೂ ಎಂಬ ಪೋಸ್ಟರ್ ಗಳನ್ನು ಕೈ ಕಾರ್ಯಕರ್ತರು ಅಂಟಿಸುತ್ತಿದ್ದಾರೆ.
