ಜನಾರ್ಧನರೆಡ್ಡಿ ಗಂಗಾವತಿಯಿಂದ ಕಂಟೆಸ್ಟ್ ಮಾಡ್ತಾರೆಂದು ಹೇಳಿದ್ದಾರೆ ಆದರೆ ಕಲ್ಯಾಣ ರಾಜ್ಯವನ್ನೇ ನುಂಗಿದವರು ಜನಾರ್ಧನರೆಡ್ಡಿ. ಭ್ರಷ್ಟಾಚಾರದ ಜನಕ ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂದು ಕಟ್ಟಿಕೊಂಡಿದ್ದಾರೆ. ರಾಜ್ಯದ ಪ್ರಜ್ಞಾನವಂತ ಮತದಾರರು ಅರ್ಥ ಮಾಡಿಕೊಳ್ಳಬೇಕು ಇವರ ಈ ನಾಟಕವನ್ನಾಎಂದು ಕೊಪ್ಪಳದ ಗಂಗಾವತಿಯಲ್ಲಿ ಟಪಾಲ್ ಗಣೇಶ್ ಹೇಳಿಕೆ ನೀಡಿದ್ದಾರೆ.
ಬಳ್ಳಾರಿಯಲ್ಲಿ ಒಂದು ಸಣ್ಣ ಗಣಿಗಾರಿಕೆ ಮಾಡದವರು ಸಾವಿರಾರು ಕೋಟಿ ಆಸ್ತಿ ಮಾಡಿದ್ದಾರೆ,ಇದೇ ಸಾವಿರಾರು ಕೂಟಿಯಿಂದ ಚುನಾವಣೆಯಲ್ಲಿ ನಿಂತಿದ್ದಾರೆ ಹಾಗಾಗಿ ಪ್ರಜ್ಞಾನವಂತ ಮತಪ್ರಭುಗಳು ಇಂತಹ ವ್ಯಕ್ತಿಗೆ ಮತ ಹಾಕಬೇಡಿ ಹಾಗು ಅಕ್ರಮ ಗಣಿಗಾರಿಕೆ ಮಾಡಿದವರು ಜನಾರ್ಧನ ರೆಡ್ಡಿ.ಇಲ್ಲಿ ಗಂಗಾವತಿಯಲ್ಲಿ ಏನಾದ್ರೂ ಸಂಪತ್ತು ಇರುತ್ತೆ! ಗಂಗಾವತಿಯಲ್ಲೂ ಲೂಟಿ ಮಾಡಿ ನಗರವನ್ನ ಕಲುಷಿತ ಮಾಡುತ್ತಾರೆ

ಇಂತಹವರನ್ನು ತಿರಸ್ಕರಿಸಿ ಎಂದ ಟಪಾಲ್ ಗಣೇಶ್ ವಾಗ್ದಾಳಿ ನಡೆಸಿದರು.ಗಂಗಾವತಿಯಲ್ಲಿ ಒಳ್ಳೆ ಜನರನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಸ್ಥಳೀಯರನ್ನು ಆಯ್ಕೆ ಮಾಡಿಕೊಳ್ಳಿ ಚುನಾವಾಣಾ ಸಂದರ್ಭದಲ್ಲಿ ಜನಾರ್ಧನರೆಡ್ಡಿ ಬಳಿ ಹಣ ವಿದೆ ಎಂದು ಸ್ವಲ್ಪ ಜನರು ಹಿಂಬಾಲು ಬಿದ್ದಿದ್ದಾರೆ ಅಷ್ಟೆ.ನಾನು ಕಾಂಗ್ರೆಸ್, ಬಿಜೆಪಿ ವಿರುದ್ಧವಲ್ಲ ಜನಾರ್ಧನರೆಡ್ಡಿ ವಿರುದ್ಧ ಎಂದು ನೇರವಾಗಿ ಜನಾರ್ಧನ ರೆಡ್ಡಿ ವಿರುದ್ಧ ಆರೋಪ ಮಾಡಿದರು.