Breaking News

ಹೆಚ್ಚುತ್ತಿರುವ ಅನಧಿಕೃತ ಖಾಸಗಿ ಶಾಲೆಗಳು

ಬೆಂಗಳೂರಿನ ಖಾಸಗಿ ಶಾಲೆಗಳು ಸಿಬಿಎಸ್‌ಇ ಬೋರ್ಡ್‌ಗೆ ಸಂಬಂಧಿಸಿವೆ ಎಂದು ಸುಳ್ಳು ಹೇಳಿಕೆ ನೀಡಿರುವ ವಿವಾದದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕದಲ್ಲಿ ಅನಧಿಕೃತ ಖಾಸಗಿ ಶಾಲೆಗಳನ್ನು ಗುರುತಿಸಲು ಬ್ಲಾಕ್ ಮಟ್ಟದ ಶಿಕ್ಷಣ ಅಧಿಕಾರಿಗಳಿಗೆ ರಾಜ್ಯಾದ್ಯಂತ ಸಮೀಕ್ಷೆಗೆ ಆದೇಶಿಸಿತ್ತು.ಸಮೀಕ್ಷೆ ನಡೆಸಿದಾಗ ರಾಜ್ಯದಲ್ಲಿ ಒಟ್ಟು 1,316 ಖಾಸಗಿ ಶಾಲೆಗಳು ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಕಂಡುಬಂದಿದೆ.ಉಲ್ಲಂಘನೆಗಳಲ್ಲಿ ನೋಂದಣಿ ಇಲ್ಲದೆ ಶಾಲೆಗಳನ್ನು ನಡೆಸುವುದು, ಅನಧಿಕೃತ ಪಠ್ಯಕ್ರಮವನ್ನು ಬೋಧಿಸುವುದು, ಅನುಮೋದನೆಯಿಲ್ಲದೆ ಹೆಚ್ಚುವರಿ ವಿಭಾಗಗಳನ್ನು ಅನುಮತಿಸುವುದು ಸೇರಿವೆ.ಒಟ್ಟು 95 ಶಾಲೆಗಳು ವಿದ್ಯಾರ್ಥಿಗಳಿಗೆ ಕಾನೂನುಬಾಹಿರವಾಗಿ ಸಿಬಿಎಸ್‌ಇ ಪಠ್ಯಕ್ರಮವನ್ನು ಕಲಿಸುತ್ತಿದೆ ಮತ್ತು ಒಟ್ಟು 74 ಶಾಲೆಗಳು ಅನುಮೋದನೆಯಿಲ್ಲದೆ ವಿದ್ಯಾರ್ಥಿಗಳನ್ನು ಪ್ರೌಢಶಾಲೆಗೆ ಸೇರಿಸಿಕೊಂಡಿವೆ. ಹಾಗೂ ನೋಂದಣಿ ಇಲ್ಲದೆ ಒಟ್ಟು 63 ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಅಕ್ರಮವಾಗಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿರುವ ವರದಿಯಲ್ಲಿ ಬಹಿರಂಗವಾಗಿದೆ. ಒಂದೇ ಕಟ್ಟಡದಲ್ಲಿ ನಿಮವನ್ನು ಉಲ್ಲಂಘಿಸಿ ಬಹು ಬೋರ್ಡ್‌ಗಳನ್ನು ಹೊಂದಿದ ಒಟ್ಟು 21 ಶಾಲೆಗಳನ್ನು,ಹಾಗೂ ಶಿಕ್ಷಣ ಅಧಿಕಾರಿಗಳಿಂದ ಅನುಮತಿ ಪಡೆಯದೆ ಸ್ಥಳಾಂತರಗೊಂಡ ಸುಮಾರು 141 ಖಾಸಗಿ ಶಾಲೆಗಳನ್ನು ರಾಜ್ಯ ಸರ್ಕಾರ ಗುರುತಿಸಿದೆ.485 ಅನಧಿಕೃತ ಶಾಲೆಗಳೊಂದಿಗೆ ಬೆಂಗಳೂರು ಉತ್ತರ ಮೊದಲ ಸ್ಥಾನದಲ್ಲಿದೆ, ಬೆಂಗಳೂರು ದಕ್ಷಿಣದಲ್ಲಿ 386, ತುಮಕೂರು 109 ಮತ್ತು ಬೆಂಗಳೂರು ಗ್ರಾಮಾಂತರ 66 ಶಾಲೆಗಳೊಂದಿಗೆ ಅಗ್ರಸ್ಥಾನದಲ್ಲಿದೆ ಎಂದು ಸಮೀಕ್ಷೆ ವರದಿ ನೀಡಿದೆ.

Share News

About admin

Check Also

Featured Video Play Icon

ಅಕ್ರಮ ಗಾಂಜಾ ಮಾರಾಟ: ಹದಿಮೂರು ಜನರ ಹೆಡೆಮುರಿ ಕಟ್ಟಿದ ಖಾಕಿ…

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಗಾಂಜಾ ಘಾಟು ಜೋರಾಗಿದೆ. ಅಕ್ರಮವಾಗಿ ಗಾಂಜಾ ಮಾರಾಟ ಹಾಗೂ ಖರೀದಿಗೆ ಬಂದಂತಹ 13 ಜನರನ್ನು ಶಹರ …

Leave a Reply

Your email address will not be published. Required fields are marked *

You cannot copy content of this page