ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಶಾಸಕ ಸಾ.ರಾ ಮಹೇಶ್ಅವರೊಂದಿಗೆ ಸಂಧಾನಕ್ಕೆ ಮುಂದಾಗಿದ್ದಾರೆ ಎಂಬ ಫೋಟೋ ವೈರಲ್ ಆಗುತ್ತಿದ್ದಂತೆ ಹಿರಿಯ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಸಾಲು ಸಾಲು ಆರೋಪಗಳನ್ನು ಮಾಡಿದ್ದರು.ಉನ್ನತ ಮಟ್ಟದಲ್ಲಿರುವ ಮಹಿಳಾ ಅಧಿಕಾರಿಗಳ ನಡುವೆ ಜಟಾಪಟಿಗೆ ಕಾರಣವಾದ್ದು, ಇಂದು ರೋಹಿಣಿ ಸಿಂಧೂರಿ ಅವರು ರೂಪಾ ಅವರ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಡಿ ರೂಪಾ ವಿರುದ್ಧ ಕಾನೂನು ಸಮರ ನಡೆಸುತ್ತೇವೆ ಎಂದು ಹೇಳಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಗೆ ತೆರಳಿ ಸುಧೀರ್ ರೆಡ್ಡಿ ದೂರು ಸಲ್ಲಿಸಿದ್ದಾರೆ. ಮಾಧ್ಯಮದವರು ಮನೆ ಮುಂದೆ ಬಂದು ಪ್ರಶ್ನೆಗಳನ್ನು ಕೇಳಿದರೆ ಉತ್ತರ ಹೇಳಲು ಆಗಲ್ಲ, ಎಲ್ಲೆಂದರಲ್ಲಿ ಆ ಬಗ್ಗೆ ಮಾತನಾಡೋದು ಬೇಡ , ಶೀಘ್ರದಲ್ಲಿಯೇ ಇದಕ್ಕೆಲ್ಲಾ ಉತ್ತರ ಕೊಡುವೆ. ಮಾತನಾಡುವ ವೇದಿಕೆಯೂ ಇದಲ್ಲ. ಈ ಎಲ್ಲಾ ವಿಷಯಗಳನ್ನು ಸರ್ಕಾರದ ಮುಂದೆ ತರಬೇಕು.ಈ ರೀತಿ ವೈಯಕ್ತಿಕ ಆರೋಪ ಮಾಡೋದು ತಪ್ಪು. ಇದನ್ನೆಲ್ಲಾ ಸುಮ್ನೆ ಬಿಡಲ್ಲ ಎಂದು ,ಇಂದು ಕಚೇರಿಗೂ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದರು.
