ಹುಬ್ಬಳ್ಳಿ ತಾಲೂಕಿನ ಕಂಪ್ಲಿಕೊಪ್ಪ ಗ್ರಾಮದಲ್ಲಿ ಮಠದ ಪೂಜೆ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಹಲವು ವರ್ಷಗಳಿಂದ ಪೂಜೆ ವಿವಾದ ನಡೆಯುತ್ತಿದೆ. ಆದರೆ ಗ್ರಾಮಸ್ಥರು ದೇವಸ್ಥಾನಕ್ಕೆ ಬೇರೆ ಅರ್ಚಕನನ್ನು ನೇಮಿಸಲು ಮುಂದಾಗಿದ್ದಾರೆ.ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಬಸವಣ್ಣ ದೇವಸ್ಥಾನದ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶ್ ಮುಳುಗಂದಮಠ ನಾನೇ ಪೂಜೆ ಮಾಡ್ತೀನಿ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಅವರ ಕಾರ್ಯವೈಖರಿ ಬಗ್ಗೆ ಬೇಸತ್ತ ಗ್ರಾಮಸ್ಥರು ಅರ್ಚಕರನ್ನು ಪೂಜೆ ಮಾಡದಂತೆ ಹೇಳಿದ್ದಾರೆ. ಮಠದ ಪೂಜೆ ವಿಷಯವಾಗಿ ಗ್ರಾಮಸ್ಥರು ಮತ್ತು ಅರ್ಚಕರ ನಡುವೆ ಮಾತಿಗೆ ಮಾತು ಬೆಳೆದು ,ವಿಕೋಪಕ್ಕೆ ಕಾರಣವಾಗಿದೆ. ದೇವಸ್ಥಾನದಲ್ಲಿಯೇ ಅರ್ಚಕೊಂದಿಗೆ ಗ್ರಾಮಸ್ಥರ ಗಲಾಟೆ ಮಾಡಿಕೊಂಡಿದ್ದು, ಓಡಿ ಬಂದು ಒದ್ದು ಹಲ್ಲೆ ಮಾಡಿದ್ದು, ಅರ್ಚಕ ಪ್ರಕಾಶ್ ಮುಳುಗಂದಮಠಗೆ ಥಳಿಸಿದ್ದಾರೆ. ಹೋಡೆದಾಟದಲ್ಲಿ
ಅರ್ಚಕನ ಮಗನಿಗೂ ಗ್ರಾಮಸ್ಥರು ಥಳಿಸಿದ್ದಾರೆ.ಈ ಹಲ್ಲೆ ಮಾಡಿರೋ ವಿಡಿಯೋ ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇದೇ ವಿಚಾರಕ್ಕೆ ಹಲವು ಬಾರಿ ವಾಗ್ವಾದ ನಡೆದಿದ್ದು ಇಂದು ಅಧಿಕಾರಿಗಳ ಗ್ರಾಮ ವಾಸ್ತವ್ಯ ಇರೋ ವೇಳೆನೇ ಗ್ರಾಮಸ್ಥರು ಅರ್ಚಕರು ನಡುವೆ ಹೊಡೆದಾಡಿಕೊಂಡಿದ್ದಾರೆ. ಗ್ರಾಮೀಣ ಪೊಲೀಸರು ವ್ಯಾಪ್ತಿಯಲ್ಲಿ ಘಟನೆ ಕಂಡುಬಂದಿದೆ.
