ಗದಗ ಬೆಟಗೇರಿಯ ಕೈಗಾರಿಕಾ ವಲಯದಲ್ಲಿರುವ ರಾಘವೇಂದ್ರ ಪೂಜಾರ ಎಂಬುವವರಿಗೆ ಸೇರಿದ ರಂಧ್ರ ಮಷಿನ್ (ಕಟ್ಟಿಗೆ ಅಡ್ಡೆ) ಕಟ್ಟಡಕ್ಕೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಮಷಿನ್, ಕಟ್ಟಿಗೆ ಬೆಂಕಿಗಾಹುತಿಯಾಗಿರುವ ಸ್ಥಳಕ್ಕೆ ಬುಧವಾರ ಗದಗ-ಬೆಟಗೇರಿ ನಗರಸಭಾಧ್ಯಕ್ಷೆ ಉಷಾ ದಾಸರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಗದಗ ತಹಶೀಲ್ದಾರ ಮಲ್ಲಿಕಾರ್ಜುನ್ ಅವರಿಗೆ ಕರೆ ಮಾಡಿ ಸರ್ಕಾರದಿಂದ ಸಿಗುವ ಪರಿಹಾರವನ್ನು ಶೀಘ್ರವೇ ಸಂತ್ರಸ್ತ ಮಾಲೀಕರಿಗೆ ಒದಗಿಸಿ ಕೊಡುವಂತೆ ಸೂಚಿಸಿದರು.
