ಬಳ್ಳಾರಿ ಜಿಲ್ಲೆಯ ಸಂಡೂರಿನ ಎಸ್ಆರ್ಎಸ್ ಮೈದಾನದಲ್ಲಿ ಬಿಜೆಪಿ ವಿಜಯ ಸಂಕಲ್ಪ ಸಮಾವೇಶ ನಡೆದಿದ್ದು, ಸಮಾವೇಶದಲ್ಲಿ ಭಾಷಣ ಮಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು , ಈ ಬಾರಿ ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಉತ್ಸಾಹದಿಂದಾ ಹೇಳಿದರು. ಸಂಡೂರು ಪಟ್ಟಣದಲ್ಲಿರುವ ಎಸ್ಆರ್ಎಸ್ ಮೈದಾನದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಕಾರ್ಯಕರ್ತರ ಹಾಗೂ ಅಭಿಮಾನಿಗಳನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಘೋಷಣೆ ಕೂಗಿದರು. ನಂತರ ಪ್ರತಿಧ್ವನಿಯಾಗಿ ಕಾರ್ಯಕರ್ತರಿಂದ ಜೋರಾದ ಶಬ್ದದೊಂದಿಗೆ ಜಯಘೋಷಗಳು ಬಂದವು . ಭಾಷಣ ಆರಂಭಿಸಿದ ಅಮಿತ್ ಶಾ ಅವರು ,ವೀರ ಆಂಜನೇಯ ಅಂಜನಾದ್ರಿ , ಹಕ್ಕಬುಕ್ಕ, ಶ್ರೀಕೃಷ್ಣ ದೇವರಾಯರ ಭೂಮಿಗೆ ಬಂದಿದ್ದೇನೆ. ಸಂಡೂರಿನ ಭೂಮಿಯ ಕುಮಾರಸ್ವಾಮಿಗೆ ನಮಸ್ಕರಿಸುವೆ, 2 ಗಂಟೆ ತಡವಾಗಿ ಬಂದಿರುವುದಕ್ಕೆ ಕ್ಷಮೆ ಕೋರುತ್ತೇನೆ ಎಂದರು. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಪರಿವಾರವಾದಿ ಪಕ್ಷಗಳಾಗಿವೆ ಪರಿವಾರವಾದಿ ಪಕ್ಷಗಳು ಬಡವರ ಕಲ್ಯಾಣ ಮಾಡುವುದಿಲ್ಲ, ಜೆಡಿಎಸ್ಗೆ ಮತ ಹಾಕಿದರೆ ಅದು ಕಾಂಗ್ರೆಸ್‌ಗೆ ಮತ ಹಾಕಿದಂತೆ. ಸಿದ್ದರಾಮಯ್ಯ ಅವಧಿಯಲ್ಲಿ ಅವರ ಹೈಕಮಾಂಡ್ಗೆ ಕರ್ನಾಟಕ ATM ಆಗಿತ್ತು ಎಂದು ವ್ಯಂಗ್ಯವಾಗಿ ಹೇಳಿದರು.
ದೇಶದಲ್ಲಿ ಗ್ಯಾಸ್ ಸಂಪರ್ಕ ಇಲ್ಲದ ಮನೆಗಳಿಗೆ ನಾವು ಗ್ಯಾಸ್ ಸಂಪರ್ಕ ಕಲ್ಪಿಸಿದ್ದೇವೆ, ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದ್ದೇವೆ. ಕೊರೋನಾ ಮಹಾಮಾರಿಯಂತಹ ಸಂದರ್ಭದಲ್ಲಿ ವ್ಯಾಕ್ಸಿನ್ ನೀಡುವ ಮೂಲಕ ಕರ್ನಾಟಕದ ಹಾಗೂ ದೇಶವನ್ನು ಕೋವಿಡ್ ಮುಕ್ತ ಮಾಡುವಲ್ಲಿ ಶ್ರಮಿಸಿದ್ದೇವೆ. ಪ್ರತಿ ರೈತರ ಖಾತೆಗೆ 6 ಸಾವಿರ ಹಣ ಹಾಕಲಾಗಿದೆ. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್ 370 ರದ್ದುಗೊಳಿಸಲು ನಮ್ಮ ಸರ್ಕಾರ ಮುಂದಾದಾಗ ವಿರೋಧ ಪಕ್ಷಗಳು ವಿರೋಧಿಸಿದ್ದರು. ಆ ಮೂಲಕ ವಿಪಕ್ಷಗಳು ಕಾಶ್ಮೀರ ಪ್ರತ್ಯೇಕವಾಗಿಡಲು ಯತ್ನಿಸುತ್ತಿದ್ದವು. ಆದರೆ ನಾವು ಅದಕ್ಕೆಲ್ಲ ಬಗ್ಗದೆ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್ 370 ತೆಗೆದುಹಾಕಿದ್ದೇವೆ. ಜಮ್ಮು ಕಾಶ್ಮೀರ ಭಾರತದ್ದು ಎಂದು ಸಾಬೀತು ಮಾಡಿದ್ದೇವೆ ಎಂದರು ತಮ್ಮ ಸಾಧನೆಗಳನ್ನಾ ಬಿಚ್ಚಿಟ್ಟರು. ಬಳ್ಳಾರಿ ಜಿಲ್ಲಾ ಬಿಜೆಪಿ ಘಟಕದಿಂದ ಸಮಾವೇಶ ಕೊನೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಆನಂದ್ ಸಿಂಗ್, ಶಶಿಕಲಾ ಜೊಲ್ಲೆ, ಬಿ.ಶ್ರೀರಾಮುಲು ಮತ್ತಿತರರು ಅಮಿತ್ ಶಾ ಅವರನ್ನಾ ಸನ್ಮಾನಿಸಿ , ಕುಮಾರಸ್ವಾಮಿ ದೇಗುಲದ ಭಾವಚಿತ್ರವನ್ನು ಕಾಣಿಕೆಯಾಗಿ ನೀಡಿದರು.