ಕಾಂಗ್ರೆಸ್ ಇಷ್ಟು ವರ್ಷ ಕತ್ತೆ ಕಾಯ್ತಾ ಇತ್ತಾ? ಎಂದು ಹೇಳಿದ್ದು, ಪ್ರಹ್ಲಾದ ಜೋಶಿ ಅವರು ನಮ್ಮ ಪಕ್ಷದ ಪ್ರಣಾಳಿಕೆ ಬಗ್ಗೆ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಅವರ ಅಹಂಕಾರ ಮಿತಿಮೀರಿದೆ. ಈ ಅಹಂಕಾರಕ್ಕೆ ಜನ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ. ಜೋಶಿ ಅವರಿಗೆ ಅಧಿಕಾರದಿಂದ ನೆಲ ಕಾಣುತ್ತಿಲ್ಲ. ಅವರು ಮೊದಲು ನೆಲ ನೋಡಿ ಮಾತನಾಡಲಿ, ಯಾವ ಅಧಿಕಾರವೂ ಇಲ್ಲಿ ಶಾಶ್ವತವಲ್ಲ. ಎಂತೆಂತವರದ್ದೋ ಅಹಂಕಾರ ಇಲ್ಲಿ ಮುಗಿದು ಹೋಗಿದೆ. ಜೋಶಿ ಅವರ ರಾಜಕೀಯ ಇತಿಶ್ರೀ ಕೂಡ ಸಮೀಪ ಬಂದಿದೆ. ಅದು ಅವರ ಮಾತಿನಲ್ಲಿ ಕಂಡು ಬರುತ್ತಿದೆ ಎಂದು ಧಾರವಾಡದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿರುವ ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಪಿ.ಎಚ್.ನೀರಲಕೇರಿ, ನಾಗರಾಜ ಗೌರಿ, ಅಲ್ತಾಫ್ ಹಳ್ಳೂರ ಅವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
