ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು, ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡ್ತಿರೊ ಖದೀಮರು, ಹಳೇ ಹುಬ್ಬಳ್ಳಿಯ ಶಿಮ್ಲಾನಗರದಲ್ಲಿ ಕೈಚಳಕ ತೋರಿಸಿದ ಖತರ್ನಾಕ್ ಕಳ್ಳರ ಗ್ಯಾಂಗ್.
ಶಿಮ್ಲಾನಗರದಲ್ಲಿ ವಾಸವಾಗಿದ್ದ ಶಕುಂತಲಾ ಅವರು ತಮ್ಮ ಸಂಬಂಧಿಕರ ಮನೆಗೆ ಹೋದಾಗ, ಮನೆಯ ಬೀಗ ಮುರಿದು 5.5ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಮರಳಿ ಮನೆಗೆ ಬಂದು ನೋಡಿದಾಗ ಘಟನೆ ಬಯಲಾಗಿದೆ. 4.92 ಲಕ್ಷ ಮೊತ್ತದ ಬಂಗಾರ, 44 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿ, 10 ಸಾವಿರ ಮೌಲ್ಯದ ವಜ್ರ, 10 ಸಾವಿರ ನಗದು ಕಳುವಾಗಿದೆ. ಸದ್ಯ ಹಳೆ ಹುಬ್ಬಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.