ಸೇನೆಯ ವೈದ್ಯಕೀಯ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಾಗರಾಜ ಎಂಬಾತನು, ರಜೆ ಮೇಲೆ ಧಾರವಾಡದ ಹೆಬ್ಬಳ್ಳಿ ಗ್ರಾಮಕ್ಕೆ ಆಗಮಿಸಿದ್ದರು. ಹೆಬ್ಬಳ್ಳಿಯಿಂದ ಹೆಂಡತಿಗೆ ಬೆಳಗಾವಿಯ ಗೋಕಾಕ ಸಮೀಪದ ಸುಲದಾಳಕ್ಕೆ ತವರು ಮನೆಗೆ ಬಿಡಲು ಹೋಗುತ್ತಿದ್ದಾಗ ವಾಹನ್ ಸೌಂಡ್ ಮಾಡಿದ್ದಕ್ಕೆ, ಕಿಡಿಗೇಡಿಗಳು ನಾಗರಾಜ ಹೆಬ್ಬಾಳ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಧಾರವಾಡದ ಮರೇವಾಡ ಮಹಾದ್ವಾರ ಬಳಿ ಘಟನೆ ನಡೆದಿದ್ದು, ಆರು ಜನರ ಯುವಕರ ತಂಡ ಕಲ್ಲು, ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿ, ಎರಡು ತೊಲೆ ಚಿನ್ನದ ಸರ ಏಳೆದುಕೊಂಡ ಹೋಗಿದ್ದಾರೆ. ಗಾಯಗೊಂಡ ನಾಗರಾಜ ಹೆಬ್ಬಾಳ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಘಟನೆಯಿಂದ ನಾಗರಾಜ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳು ಭಯಭೀತರಾಗಿದ್ದಾರೆ. ಈ ಕುರಿತು ನಾಗರಾಜ ಅವರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
