ಹುಬ್ಬಳ್ಳಿ: ಕನ್ನಡ ಸಾಹಿತ್ಯ ಸಮ್ಮೇಳ ಕನ್ನಡ ಸಾಹಿತ್ಯ ಪರಿಷತ್ ಯಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನವಾಗಿದೆ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲು ಅಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶವಾಗಿದೆ. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಕಲಘಟಗಿ ತಾಲೂಕಿನ ಮಿಶ್ರೀಕೋಟಿ ಗ್ರಾಮದಲ್ಲಿ ಫೆ. 26 ರಂದು ತಾಲ್ಲೂಕಾ ಮಟ್ಟದ ಏಂಟನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದು ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಆಗಮಿಸಿದ್ದು ಕಾರ್ಯಕ್ರಮಕ್ಕೆ ಮೆರಗು ನೀಡಿದಂತಾಗಿದೆ. ಮುಂಜಾನೆ 8 ಗಂಟೆಗೆ ಶಿವಪ್ಪಣ್ಣ ಜಿಗಳೂರು ಮಹಾವಿದ್ಯಾಲದಲ್ಲಿ , ಶಾಸಕ ಸಿ.ಎಮ್.ನಿಂಬಣ್ಣವರ ರಾಷ್ಟ್ರ ಧ್ವಜಾರೋಹಣ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ನಾಡ ಧ್ವಜಾರೋಹಣ ನೆರವೇರಿಸಿದರು. ನಂತರ ಜನಪದ ವಾದ್ಯಮೇಳಗಳೊಂದಿಗೆ, ವೇಷಭೂಷಣದಲ್ಲಿದ್ದ ಊರಿನ ಮಕ್ಕಳೊಂದಿಗೆ ಮೆರವಣಿಗೆಯನ್ನು ನಡೆಸಲಾಯಿತು. ಸಮ್ಮೇಳನಾಧ್ಯಕ್ಷ ರಾದ ಮಕ್ಕಳ ಸಾಹಿತಿ ವೈ.ಜಿ.ಭಗವತಿ ಅವರ ಮೆರವಣಿಗೆಯನ್ನು ತಹಶಿಲ್ದಾರ ಯಲ್ಲಪ್ಪ ಗೋಣೆಣ್ಣವ ಉದ್ಘಾಟಿಸಿದರು. ತಾ.ಪಂ. ಅಧಿಕಾರಿ ರಾಜ್ಯ ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ, ತಾ.ಪಂ. ಅಧಿಕಾರಿ ಎಸ್.ಎಲ್.ಮಠಪತಿ, ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ, ಸಿಪಿಐ ಶ್ರೀಶೈಲ ಕೌಜಲಗಿ, ಕರ್ನಾಟಕ ಸಂಗ್ರಾಮ ಸೇನೆ ರಾವಾ.ದ.ಕ ಸಂಜೀವ ದುಮಕದಾಳ, ತಾಲೂಕಾ ಅಧ್ಯಕ್ಷ ಆತಪ್ಪ ಕುಂಕೂರ, ಪ್ರಾಚಾರ್ಯ ಎಸ್. ಎಂ.ಮರಲಿಂಗಣ್ಣವರ್, ಸಿ.ಬಿ.ಗುಡಿಮನಿ, ಗ್ರಾ.ಪಂ. ಅಧ್ಯಕ್ಷೆ ಮಹಾಂತಪ್ಪ ಸಂಶಿ, ತಾಲೂಕಾ ಕರವೇ ಅಧ್ಯಕ್ಷ ಸಚಿನ ಪವಾರ, ಜೈಕರ್ನಾಟಕ ವೇದಿಕೆ ಅಧ್ಯಕ್ಷ ಮಂಜುನಾಥ ಹೊಸುರ, ಕರವೇ ಅಧ್ಯಕ್ಷ ಶಂಕರಗೌಡ ಭಾವಿಕಟ್ಟಿ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳವರು, ಕಲಾವಿದರು, ಸಾಹಿತಿಗಳು ಪಾಲ್ಗೊಂಡಿದ್ದರು. ಸಮ್ಮೇಳನಾಧ್ಯಕ್ಷ ವೈ.ಜಿ.ಭಗವತಿ ಅವರು ಮಾತನಾಡಿ, ಕಸಾಪ ಸಮ್ಮೇಳನ ಮಹಾಧ್ವಾರಕ್ಕೆ ಗ್ರಾಮದೇವತೆ, ಮುಖ್ಯದ್ವಾರಕ್ಕೆ ದಿ.ಡಾ.ಸರೋಜನಿ ಶಿಂತ್ರಿ, ಮಹಾವೇದಿಕೆಗೆ ಕುಶಲ ಕರ್ಮಿ ಹುಬ್ಬಳ್ಳಿಯ ಸಿದ್ದಾರೂಡರ ಕೈಲಾಸ ಮಂಟಪ ನಿರ್ಮಾರ್ತೃ ದಿ. ಕಾಳಪ್ಪ ಬಡಿಗೇರ ಅವರ ಹೆಸರನ್ನು ಇಡಲಾಗಿದೆ ಎಂದರು. ಗೋಷ್ಠಿಯಲ್ಲಿ ಎ.ಎಸ್ ನಾಗಲೂತಿಮಠ, ಪಿ.ಎಂ.ಒಡೆಯರ, ವೀರಣ್ಣ ಕುಬಸದ, ರಮೇಶ ಸೊಲಾರಕೊಪ್ಪ, ವಿಜಯಲಕ್ಷ್ಮೀ ದೇಸಪಾಂಡೆ, ಗುರಲಿಂಗ ಉಣಕಲ್ಲ ಮುಂತಾದವರು ಉಪಸ್ಥಿತರಿದ್ದರು. ಹಾಗೆ ಆಗಮಿಸಿದ ಹಲವಾರು ಗಣ್ಯಮಾನ್ಯರು ಕನ್ನಡ ನಾಡು ನುಡಿಯ ಬಗ್ಗೆ ಮಾತನಾಡಿದರು. ಗ್ರಾಮದಲ್ಲಿ ಸಾಯಂಕಾಲದಿಂದಾ ಊರಿನ ಹಾಗೂ ಸುತ್ತಮುತ್ತಲಿನ ಮಕ್ಕಳಿಂದಾ, ಹಿರಿಯರಿಂದಾ ಮನೋರಂಜನಾ ಕಾರ್ಯಕ್ರಮ ಆಯೋಜಿಸಿದ್ದು, ಸಾವಿರಾರು ಜನರು ಬಂದು ಆನಂದಿಸಿದರು.


