ದೇಶದಲ್ಲಿ ಬೆಲೆಗಳು ಏರಿಕೆ ಆಗುತ್ತಿವೆ. ನಮ್ಮ ರಾಜ್ಯದಲ್ಲಿ ಅತಿವೃಷ್ಠಿ ಆಯ್ತು , ಕೊರೊನಾ ವೇಳೆಯಲ್ಲಿ ಜನರು ಆಕ್ಸಿಜನ್ ಇಲ್ಲದೆ ನರಳಾಡಿದರು. ಆಗ ಬಿಜೆಪಿ ಕೇಂದ್ರ ನಾಯಕರು ಬಂದು ವೈಮಾನಿಕ ಸಮೀಕ್ಷೆ ಮಾಡಲಿಲ್ಲ. ಜನರು ಸತ್ತಾಗ ಇವರು ಬರಲಿಲ್ಲ. ಒಬ್ಬ ಕೇಂದ್ರ ಸಚಿವರು ಕೊರೊನದಿಂದ ಮೃತರಾದಾಗ, ಅವರ ಮೃತದೇಹ ರಾಜ್ಯಕ್ಕೆ ತರಲು ಇಲ್ಲಿಯ ನಾಯಕರಿಂದ ಆಗಲಿಲ್ಲ. ಈಗ ಚುನಾವಣೆ ಇದೆ ಅಂತ ಬಿಜೆಪಿಯ ಕೇಂದ್ರ ನಾಯಕರು ಬರುತ್ತಿದ್ದಾರೆ. ಇದು ಕಿವಿ ಕಣ್ಣು ಹೃದಯ ಇಲ್ಲದ ಸರ್ಕಾರ ಎಂದು ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೆದುರಿಗೆ ಡಿ.ಕೆ ಶಿವಮಕುಮಾರ್ ಟೀಕೆ ಮಾಡಿದರು. ಕಾಂಗ್ರೆಸ್ ಖಂಡಿತ ಅಧಿಕಾರಕ್ಕೆ ಬರುತ್ತೆ ಯಾರಿಗೂ ಅನುಮಾನ ಬೇಡ. ನಾವು ಸರ್ಕಾರಿ ನೌಕರರ ಪರವಾಗಿ ಇದ್ದೇವೆ. ನಾವು ಅಧಿಕಾರಕ್ಕೆ ಬಂದ ಕೂಡಲೆ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಮಕುಮಾರ್ ಆಶ್ವಾಸನೆ ನೀಡಿದರು.
