Breaking News

ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ತಾಲೂಕ ಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನ

ಹುಬ್ಬಳ್ಳಿ: ತಾಲೂಕ ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ ವತಿಯಿಂದ ಹುಬ್ಬಳ್ಳಿ ನಗರದಲ್ಲಿ ತಾಲೂಕ ಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ನಾಡಿದ್ದು ದಿ. 4ರಂದು ಬಣಕಲ್ ಕೆರೆ ಹತ್ತಿರದ ಸಿದಪಜ್ಜನವರ ಹೊಸಮಠದ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ರಾಜಣ್ಣ ಕೊರವಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬೆಳಿಗ್ಗೆ 8 ಗಂಟೆಗೆ ಮಹಾನಗರ ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ. ಸಾಹಿತಿ ಸಿ.ಬಿ. ಮರಿಗೌಡರ ಬೆಳಿಗ್ಗೆ 8.30 ಕೈ ಉಣಕಲ್‌ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನದಿಂದ ಹೊರಡುವ ಭವ್ಯ ಕನ್ನಡ ಭುವನೇಶ್ವರ ದೇವಿಯ ಮೆರವಣಿಗೆ ಚಾಲನೆ ನೀಡುವರು ಹಾಗೂ ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ ಸಮ್ಮೇಳನ ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದರು. ಉದ್ಘಾಟನೆ ನಿವೃತ್ತ ಪ್ರಾಚಾರ್ಯ ಶಂಭು ಬಳಿಗಾರ ಮಾಡುವರು ಸ್ಮರಣ ಸಂಚಿಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಿಡುಗಡೆ ಮಾಡುವರು. ಅತಿಥಿಗಳಾಗಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಹಾಲಪ್ಪ ಆಚಾರ, ಶಂಕರಪಾಟೀಲ ಮುನೇನಕೊಪ್ಪ ಭಾಗವಹಿಸುವರು. ಸಮ್ಮೇಳನದ ಅಂಗವಾಗಿ ಚಿಂತನ ಮಂಥನ, ಸಾಂಸ್ಕೃತಿಕ ಪರಂಪರೆಯ ಹಾಗೂ ಆಧುನಿಕ ಗೋಷ್ಠಿ ಹಾಗೂ ಕವಿಗೋಷ್ಠಿ ಜರಗಲಿವೆ ಎಂದು ತಿಳಿಸಿದರು. ಸಂಜೆ 5 ಗಂಟೆಗೆ ಸಮ್ಮೇಳನಾಧ್ಯಕ್ಷ ಸಿ.ಬಿ. ಮರಿಗೌಡರ ಅವರೊಂದಿಗೆ ಸಂವಾದ ನಡೆಯಲಿದ್ದು, ಸಂವಾದಲ್ಲಿ ಸಾಹಿತಿ ಕುಮಾರ ಬೇಂದ್ರೆ, ಮೃತ್ಯುಂಜಯ ಮಟ್ಟಿ, ಸುರೇಶ ಹೊರಕೇರಿ, ಸರೋಜಾ ಮೇಟಿ ಸೇರಿದಂತೆ ಇನ್ನಿತರು ಭಾಗವಹಿಸಲಿದ್ದಾರೆ. ಹಾಗೂ6 ಗಂಟೆಗೆ ಸಮ್ಮೇಳನ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆ ಹಿರಿಯ ಸಾಹಿತಿ ಪ್ರೊ.ಕೆ.ಎಸ್‌.ಶರ್ಮಾ ವಹಿಸಲಿದ್ದಾರೆ. ಸಮಾರೋಪ ಭಾಷಣ ಮಕ್ಕಳ ಸಾಹಿತಿ ನಿಂಗಣ್ಣ ಕುಂಟೆ ಮಾಡುವರು ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ನಗರ ಘಟಕದ ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ, ಚನ್ನಬಸಪ್ಪ ಧಾರವಾಡ ಶೆಟ್ಟರ, ಗಿರಿಜಾ ಚಿಕ್ಕಮಠ, ಸಂಧ್ಯಾ ದಿಕ್ಷಿತ, ಜಯಶ್ರೀ ಬೇವೂರ, ಉಮೇಶಗೌಡಾ ಕೌಜಗೇರಿ, ಬಸವರಾಜ ಮಳವಾಡ ಪತ್ರಿಕಾಗೋಷ್ಠಿಯಲ್ಲಿದ್ದರು.

Share News

About admin

Check Also

Featured Video Play Icon

ಹುಬ್ಬಳ್ಳಿಯ ಗಬ್ಬೂರ ಬಳಿಯಲ್ಲಿನ ಹೊಡೆದಾಟದ ವಿಡಿಯೋ ವೈರಲ್: ಆರು ಜನರ ಬಂಧನ..!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾನೂ‌ನು ಸುವ್ಯವಸ್ಥೆ ಸರಿ ಇಲ್ವಾ..? ಪದೇ ಪದೇ ಹುಬ್ಬಳ್ಳಿಯಲ್ಲಿ ನಡೆಯುತ್ತಿವೆ ಗಲಾಟೆ ಗಳು. ಎರಡು ಕೊಲೆಯ ನಂತರವೂ …

Leave a Reply

Your email address will not be published. Required fields are marked *

You cannot copy content of this page