ಹುಕ್ಕೇರಿಯ ಸಮಾವೇಶವೊಂದರಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬಜೆಪಿ ನಾಯಕರಿಗೆ ಬಹಿರಂಗ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದಾರೆ. ‘ನಾನು ಸುಳ್ಳು ಹೇಳುತ್ತಿದ್ದೇನೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳುತ್ತಿದ್ದಾರೆ. ತಾತಕ್ ಇದ್ದರೆ ಒಂದೇ ವೇದಿಕೆಗೆ ನನ್ನ ಜೋತೆಗೆ ಚರ್ಚೆಗೆ ಬನ್ನಿ. ನಿಮ್ಮ ಪ್ರಣಾಳಿಕೆ ತೆಗೆದುಕೊಂಡು ನೀವು ಬನ್ನಿ, ನನ್ನ ಪ್ರಣಾಳಿಕೆ ತೆಗೆದುಕೊಂಡು ನಾನು ಬರುತ್ತೇನೆ. ಬಹಿರಂಗ ಚರ್ಚೆ ಮಾಡೋಣ ಎಂದು ಎಂದರು. ಬಿಜೆಪಿ ಅಧಿಕಾರಕ್ಕೆ ಬಂದ್ರೆ 10 ಕೆಜಿ ಅಕ್ಕಿ ನೀಡುತ್ತೇವೆ ಮತ್ತು ರೈತರ ಸಾಲ ಮನ್ನಾ ಮಾಡುತ್ತೇವೆ ಅಂದಿದ್ರು, ಇಗಾ ಒತ್ತಾಯಿಸಿದರೆ ಯಡಿಯೂರಪ್ಪ ಅವರು ನೋಟ್ ಪ್ರಿಂಟ್ ಮಾಡುವ ಯಂತ್ರ ಇಟ್ಟಿಲ್ಲ ಎನ್ನುತ್ತಿದ್ದಾರೆ. ಈ ಸರ್ಕಾರವನ್ನು ‘ಅಲಿಬಾಬಾ ಔರ್ ಚಾಲಿಸ್ ಚೋರ್’ ಅಂತ ಕರೆಯುತ್ತೇನೆ ಎಂದು ಬಿಜೆಪಿ ವಿರುದ್ಧ ಟೀಕಿಸಿದರು. ಪ್ರಮಾಣವಚನ ಸ್ವೀಕರಿಸಿದ ದಿನವೇ 5 ಯೋಜನೆಗಳನ್ನು ಜಾರಿಗೆ ತರುವಂತೆ ಆದೇಶ ಮಾಡಿದ್ದೆ. ಎಲ್ಲಾ ಧರ್ಮದ, ಎಲ್ಲಾ ಜಾತಿಯ ಜನರಿಗೆ ಅನ್ನಭಾಗ್ಯ ಯೋಜನೆ ಮಾಡಿದ್ದೆವು. ಲಂಚ ಹೊಡೆಯೋದು ಕಮ್ಮಿ ಮಾಡಿ, ಆಗ ಅಕ್ಕಿ ಕೊಡಲು ಸಾಧ್ಯವಾಗುತ್ತೆ ಅಂತ ಬುದ್ಧಿ ಹೇಳಿದೆ. ಇವರ ಮನೆ ಹಾಳಗ, 7 ಕೆಜಿ ಅಕ್ಕಿಯಿಂದ 5 ಕೆಜಿಗೆ ಇಳಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯವರು ಇನ್ನೂ ಗೆದ್ದಿಲ್ಲ, ಆದರೂ ಸಹ ಈಗಲೆ ವಿಜಯ ಸಂಕಲ್ಪ ಯಾತ್ರೆ ಮಾಡ್ಕೊಂಡು ತಿರುಗಾಡುತ್ತಿದ್ದಾರೆ. ಈ ಬಾರಿ ನಾವು ಅಧಿಕಾರಕ್ಕೆ ಬರುತ್ತೇವೆ. ಹುಕ್ಕೇರಿಗೆ ಬೇಕಾದ ಎಲ್ಲಾ ಅಭಿವೃದಿ ಕೆಲಸ ಮಾಡೋಣ. ನಮ್ಮನ್ನು ಬೆಂಬಲಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
