ಹುಬ್ಬಳ್ಳಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲೆಡೆಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅಬ್ಬರ ಜೋರಾಗಿದೆ. ಈ ನಿಟ್ಟಿನಲ್ಲಿ ಮೋದಿ ಆಗಮನಕ್ಕೆ ರಾಜ್ಯಕ್ಕೆ ರಾಜ್ಯ ಸಂಭ್ರಮಿಸುತ್ತಿದೆ. ಆದರೆ ಎಲ್ಲೆಂದರಲ್ಲಿ ಮೋದಿಯವರ ಆಗಮಿಸುವುದು ವಿರಳ ಆದರೆ ಇಲ್ಲೊಬ್ಬ ಮೋದಿ ಮಾತ್ರ ಎಲ್ಲೆಡೆಯೂ ಭೇಟಿ ನೀಡುತ್ತಿದ್ದಾರೆ. ವಾಣಿಜ್ಯನಗರಿ ಹುಬ್ಬಳ್ಳಿಗೆ ನರೇಂದ್ರ ಮೋದಿ ತದ್ರೂಪಿ ವ್ಯಕ್ತಿಯೊಬ್ಬರು ಆಗಮಿಸಿದ್ದು, ಎಲ್ಲೆಡೆಯೂ ಜ್ಯೂನಿಯರ್ ಮೋದಿ ಎಂದೇ ಖ್ಯಾತಿ ಪಡೆದಿದ್ದಾರೆ. ಹುಬ್ಬಳ್ಳಿಯ ಸಿದ್ದಪ್ಪಜ್ಜನ ಮಠಕ್ಕೆ ಭೇಟಿ ನೀಡುವ ಮೂಲಕ ಜ್ಯೂನಿಯರ್ ಮೋದಿ ಎಂದೇ ಖ್ಯಾತಿ ಪಡೆದ ಉಡುಪಿ ಸದಾನಂದ ನಾಯಕ ಇಲ್ಲಿನ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಇನ್ನೂ ವೈಯಕ್ತಿಕ ಕಾರ್ಯದ ನಿಮಿತ್ತ ಹುಬ್ಬಳ್ಳಿಗೆ ಆಗಮಿಸಿರುವ ಸದಾನಂದ ನಾಯಕ, ಮಠಕ್ಕೆ ಭೇಟಿ ನೀಡಿ ಸಿದ್ದಪ್ಪಜ್ಜನ ಆಶೀರ್ವಾದ ಪಡೆದಿದ್ದಾರೆ.

