ಹುಬ್ಬಳ್ಳಿ ಧಾರವಾಡ ಸಹಾಯ ಪೋಲಿಸ್ ಆಯುಕ್ತ ಕಾನೂನೂ ಮತ್ತು ಸುವ್ಯವಸ್ತೆ ಅಧಿಕಾರಿ ಸಾಹಿಲ್ ಬಾಗ್ಲಾ ಅವರನ್ನು ಬೆಂಗಳೂರಿನ ಇಂಟೆಲಿಜೆನ್ಸ್ ಡಿಸಿಪಿ ಆಗಿ ಅಧಿಕಾರ ವಹಿಸಿಕೊಳ್ಳಲು ಕರ್ನಾಟಕ ಸರಕಾರ ಆದೇಶ ಹೊರಡಿಸಿದ್ದು, ಡಿಸಿಪಿ ಸಾಹಿಲ್ ಬಾಗ್ಲಾ ವರ್ಗಾವಣೆ ಮಾಡಿದೆ. ಬೆಳಗಾವಿಯ ಸಿವಿಲ್ ರೈಟ್ಸ್ ಎಸ್ ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜೀವ್ ಎಂ ಅವರನ್ನು ಹುಬ್ಬಳ್ಳಿ ಧಾರವಾಡ ನೂತನ ಸಹಾಯ ಪೋಲಿಸ್ ಆಯುಕ್ತರನ್ನಾಗಿ ನೆಮಕ ಮಾಡಲಾಗಿದೆ.
