ಬಿಜೆಪಿ ರಥಯಾತ್ರೆ ಪ್ರಾರಂಭವಾಗಿದ್ದು, ಅಶೋಕ್ ಮತ್ತು ಸೋಮಣ್ಣ ಮಧ್ಯೆ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ನಾಯಂಡನಹಳ್ಳಿವರೆಗೂ ಸಾಗದೇ ರಥಯಾತ್ರೆ ಮಧ್ಯದಲ್ಲಿಯೇ ಮೊಟಕುಗೊಂಡಿದೆ. ನಾಗರಭಾವಿಯಿಂದ ನಾಯಂಡಹಳ್ಳಿ ವರೆಗೂ ರಥಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ ನಾಯಂಡಹಳ್ಳಿವರೆಗೂ ರಥಯಾತ್ರೆಯಲ್ಲಿ ತೆರಳಲು ಸಾಧ್ಯವಿಲ್ಲವೆಂದು ಅಶೋಕ್ ನಿರಾಕರಿಸಿ ಯಾತ್ರೆಯಿಂದ ಹೊರಹೊರಟರು. ಅಶೋಲ್ ಹೋದ ಹಿನ್ನೆಲೆಯಲ್ಲಿ ಕೋಪಗೊಂಡು ಸೋಮಣ್ಣನವರು ನಾಗರಬಾವಿಯಲ್ಲೆ ಯಾತ್ರೆ ಮೊಟಕುಗೊಳಿಸಿ, ತಮ್ಮ ಕ್ಷೇತ್ರದಲ್ಲಿ ಸಾಗುತ್ತಿದ್ದ ರಥಯಾತ್ರೆ ವಾಹನ ಬಿಟ್ಟು ಕಾರಿನಲ್ಲಿ ತೆರಳಿದ್ದಾರೆ.
