ನಗರದ ಕಾರವಾರ ರಸ್ತೆಯಲ್ಲಿರುವ ಸಿಎಆರ್ ಮೈದಾನದಲ್ಲಿ ಹು-ಧಾ ನಗರ ಪೊಲೀಸ್ ಕಮೀಷನರೇಟ್ ಘಟಕದ ವತಿಯಿಂದ ಹೋಳಿ ಹಬ್ಬದ ಅಂಗವಾಗಿ ಸಾರ್ವಜನಿಕ ಶಾಂತಿ ಸೌಹಾರ್ದ ಸಭೆ ನಡೆದಿದ್ದು, ಹೋಳಿ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೇ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು
https://fb.watch/j5CCsO6CDl/?mibextid=RUbZ1f
ಎಂದು ಹು-ಧಾ ಪೊಲೀಸ್ ಆಯುಕ್ತರಾದ ರಮನ್ ಗುಪ್ತಾ ಖಡಕ್ ಎಚ್ಚರಿಕೆ ನೀಡಿದ್ದಾರೆ. ಎಲ್ಲಾ ಹಬ್ಬಗಳು ಉತ್ತಮ ಸಂದೇಶಗಳನ್ನು ಕೊಡುತ್ತವೆ. ಹೀಗಾಗಿ ಎಲ್ಲಾ ಹಬ್ಬಗಳನ್ನು ಎಲ್ಲರೂ ಆಚರಿಸೋಣ. ಯಾವುದೇ ಒಂದು ಸಣ್ಣ ಘಟನೆ ನಡೆದರೂ ಕೂಡ ಕೆಟ್ಟ ಹೆಸರು ಬರುತ್ತದೆ. ಶಾಂತಿ ಸುವ್ಯವಸ್ಥೆ ಕಾಪಾಡುವುದು ಅಗತ್ಯವಾಗಿದೆ. ಬೆಂಗಳೂರು ನಂತರ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಸಿಟಿ ಹುಬ್ಬಳ್ಳಿ ಹೀಗಾಗಿ ಕೆಟ್ಟ ಹೆಸರು ಬರಬಾರದು. ಹೀಗಾಗಿ ನಮ್ಮ ಹುಬ್ಬಳ್ಳಿ ೨ ನೇ ಬೆಂಗಳೂರು ಆಗಲಿ ಎಂಬುದು ನಮ್ಮ ಆಶಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಯನಾಳ ಮಠದ ಶ್ರೀಗಳು, ಮುಸ್ಲಿಂ ಧರ್ಮಗುರುಗಳಾದ ತಾಜುದ್ದೀನ್ ಖಾದ್ರಿ, ಸಿಖ್ ಧರ್ಮ ಗುರುಗಳಾದ ಗ್ಯಾನಿ ಜನಸಿಂಗ್, ಕ್ರೈಸ್ತ ಧರ್ಮ ಗುರುಗಳಾದ ಅಲ್ವಿನ್ ಹಾಗೂ ಎಲ್ಲಾ ಧರ್ಮದ ಮುಖಂಡರು, ಡಿಸಿಪಿ ಗೋಪಾಲ್ ಬ್ಯಾಕೋಡ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಮುಖಂಡರಾದ ಮಾಜಿ ಮೇಯರ್ ಡಿ.ಕೆ.ಚವ್ಹಾನ್, ನಿರಂಜನ ಹಿರೇಮಠ, ಅಲ್ತಾಫ್ ಕಿತ್ತೂರು, ಮಹೇಂದ್ರ ಸಿಂಘಿ, ಭಾಸ್ಕರ್ ಜಿತೂರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
