ಹುಬ್ಬಳ್ಳಿ-ಧಾರವಾಡ: ಕ್ರೀಡೆಗಳನ್ನು ಆಡುವುದರಿಂದಾ ಜವಾಬ್ದಾರಿ, ನಾಯಕತ್ವ ಮತ್ತು ಆತ್ಮವಿಶ್ವಾಸದಿಂದ ಕೆಲಸ ಮಾಡಲು ಕಲಿಯುವಂತಹ ಕೌಶಲ್ಯಗಳನ್ನು ಬೇಳೆಯುತ್ತವೆ. ದೇಹವನ್ನು ಪೋಷಿಸಲು ಆರೋಗ್ಯಕರ ಪೋಷಕಾಂಶಗಳ ಆಹಾರ ಅಗತ್ಯವಿರುವಂತೆ, ಕ್ರೀಡೆಗಳನ್ನು ಆಡುವುದು ನಮ್ಮ ಜೀವನವನ್ನು ವಿಶೇಷವಾಗಿ ಬೆಳೆಯುವ ಮಕ್ಕಳಿಗೆ ಮಹತ್ತರವಾದ ಮಹತ್ವವನ್ನು ಹೊಂದಿದೆ. ಹುಬ್ಬಳ್ಳಿ ಧಾರವಾಡ ಪಶ್ಚಿಮ 74 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂಬರ್ ೧೩ ರಲ್ಲಿ ಕರ್ನಾಟಕ ಯುನಿವರ್ಸಿಟಿ ಮೈದಾನದಲ್ಲಿ ವಾರ್ಡ್ ನಂಬರ್ 19 ವಾರ್ಡ್ ನಂಬರ್ 20ರ ಯುವಕರಿಗೆ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡಿದ ಹುಬ್ಬಳ್ಳಿ ಧಾರವಾಡ ಪಶ್ಚಿಮ 74 ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಗಳಾದ ಶ್ರೀಯುತ ಬಸವರಾಜ ಮಲಕಾರಿ ಕ್ರೀಡಾ ಮಹತ್ವವನ್ನು ಹೇಳಿದರು.
