ಹುಬ್ಬಳ್ಳಿ: ಶಿಕ್ಷಕರಿಗೆ ಕಾಲ್ಪನಿಕ ವೇತನ ಸಮಸ್ಯೆ ಪರಿಹರಿಸಬೇಕು ಎಂದು ಕಳೆದ ೩೦ ವರ್ಷದಿಂದ ಹೋರಾಟ ಮಾಡಲಾಗುತ್ತಿದೆ. ೨೦೦೬ ನಂತರ ನೇಮಕವಾದ ಅನುದಾನಿತ ಶಾಲಾ ಕಾಲೇಜು ಶಿಕ್ಷಕರಿಗೆ ಹಳೇ ಪಿಂಚಣಿ ನೀಡಬೇಕು. ಹಲವಾರು ಬಾರಿ ಸರ್ಕಾರಕ್ಕೆ ಗಮನಕ್ಕೆ ತಂದರು ಸಹ ಪ್ರಯೋಜನವಾಗಿಲ್ಲ. ಇಬ್ಬರು ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಿಕ್ಷಕ ಹಾಗೂ ಉಪಾಧ್ಯಯ ವಿಭಾಗ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಗಡದಿನ್ನಿ ಆಗ್ರಹಿಸಿದರು. ರಾಜ್ಯದ ಅನುದಾನಿತ ,ಅನುದಾನರಹಿತ ಶಿಕ್ಷಣ ಸಂಸ್ಥೆ ಶಾಲಾ ಕಾಲೇಜು ಶಿಕ್ಷಕ ಶಿಕ್ಷಕೇತರ ನೌಕರರ ಜಲ್ವಂತ ಸಮಸ್ಯೆ ಗಳಾದ ಕಾಲ್ಪನಿಕ ವೇತನ, ಹಳೆ ಪಿಂಚಣಿ ಯೋಜನೆ ಮರ ಆರಂಭಿಸಬೇಕು, ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಸರ್ಕಾರ ಈಡೇರಿಸಬೇಕು. ಅನುದಾನಿತ ಶಿಕ್ಷಕರಿಗೆ ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ೨೦೦೬ರ ಆದೇಶದಂತೆ ಜಾರಿಗೆ ತರಬೇಕು. ಕನ್ನಡ ಮಾಧ್ಯಮ ಶಾಲೆಗಳ ಹಿತದೃಷ್ಟಿಯಿಂದ ವಿದ್ಯಾರ್ಥಿ ಶಿಕ್ಷಕರ ಅನುಪಾತ ೭೦:೧ ಬದಲಾಗಿ ೪೦:೧ರ ಪ್ರಕಾರ ನಿಗದಿ ಪಡಿಸಬೇಕು. ೧೯೯೫ ರ ನಂತರ ಪ್ರಾರಂಭವಾದ ಎಲ್ಲ ಮೂಲ ಸೌಲಭ್ಯ ಒಳಗೊಂಡ ಅರ್ಹವಾದ ಶಾಲಾ ಕಾಲೇಜುಗಳನ್ನು ಅನುದಾನಕ್ಕೊಳಪಡಿಸಬೇಕು. ಹಲವಾರು ಕಾರಣಗಳಿಂದ ಅನುದಾನಿತ ಶಾಲಾ ಕಾಲೇಜಿನಲ್ಲಿ ಹುದ್ದೆ ಖಾಲಿಯಾಗಿವೆ. ಇವುಗಳನ್ನು ತಕ್ಷಣ ಭರ್ತಿ ಮಾಡಿಕೊಳ್ಳಬೇಕು. ಜ್ಯೋತಿ ಸಂಜೀವಿನ ಯೋಜನೆ ಅನುದಾನಿತ ಶಿಕ್ಷಕರಿಗೆ ಜಾರಿಗೊಳಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಗಜಾನನ ಅಣ್ವೇಕರ, ಈರಪ್ಪ ಎಮ್ಮಿ ,ಎಫ್, ಎ,ಶೇಕ, ಸಿದ್ದುಮಾಹಂತ ಒಡೆಯರ್, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ರು.