ಹುಬ್ಬಳಿ-ಧಾರವಾಡ : ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುಷ್ಯ ವೈದ್ಯ ಸುರೇಶ್ ಕಳಸಣ್ಣವರ ಕರ್ತವ್ಯ ಪ್ರಜ್ಞೆ ಮರೆತು ಕುಣಿದಿದ್ದು, ರೀಲ್ಸ್ ಮಾಡಿ ವೈರಲ್ ಆಗಿ ಈಗ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾನೆ. ಹಿಂದಿಯ ಪತಲಿ ಕಮರಿಯಾ ಹಾಡಿಗೆ ಆಸ್ಪತ್ರೆಯಲ್ಲೇ ವೈದ್ಯ ಮತ್ತು ಸಿಬ್ಬಂದಿ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.
ವೈದ್ಯನ ಕುಣಿತಕ್ಕೆ ಸಿಬ್ಬಂದಿ ಯಲ್ಲಪ್ಪ ಮತ್ತು ವಿನಾಯಕ ಎಂಬುವವರು ಹಾಳೆ ಹರಿದು ಚೆಲ್ಲಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಸಿಬ್ಬಂದಿ ನಡೆಗೆ ಸಾರ್ವಜನಿಕರಿಂದ ಖಂಡನೆ ವ್ಯಕ್ತವಾಗಿದೆ. ಇನ್ನೂ ಸ್ಪಷನೆ ಕೇಳಿ ತಾಲೂಕ ವೈದ್ಯಾಧಿಕಾರಿ ವೈದ್ಯ ಕಳಸಣ್ಣವರಗೆ ನೋಟಿಸ್ ನೀಡಿದ್ದಾರೆ.

