ಹುಬ್ಬಳಿ: ಹುಬ್ಬಳ್ಳಿಯ ರಾಣಿಚೆನ್ನಮ್ಮ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಟಿಪ್ಪು ಜಯಂತಿ ಆಚರಣೆಗೆ ನೀಡಿದ ಬೆನ್ನಲ್ಲೇ ಈಗ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೂ ಸಹ ಮಹಾನಗರ ಪಾಲಿಕೆ ಅವಕಾಶ ನೀಡಿದೆ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಮಹತ್ವದ ಆದೇಶ ಹೊರಡಿಸಿದ್ದಾರೆ..
ಈ ಹಿಂದೆ ಗಣೇಶ ಉತ್ಸವಕ್ಕೆ ಅನುಮತಿ ಕೇಳಿದ್ದ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಈ ಬಾರಿಯೂ ಸಹ, ಅಧ್ಯಕ್ಷ ಸಂಜಯ್ ಬಡಾಸ್ಕರ್ ನೇತೃತ್ವದಲ್ಲಿ ರಂಗ ಪಂಚಮಿ ಪ್ರಯುಕ್ತ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಅನುಮತಿ ಕೋರಿ ಅರ್ಜಿ ಸಲ್ಲಸಲಾಗಿತ್ತು. ಅರ್ಜಿ ವಿಚಾರಣೆ ಮಾಡಿದ ಪಾಲಿಕೆ ವಿವಿಧ ನಿಯಮಗಳನ್ನು ವಿಧಿಸಿ 9 ರಿಂದ 11 ರವರೆಗೂ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಮತ್ತು ಮೂರ್ತಿ ದಹನಕ್ಕೂ ಸಹ ಅನುಮತಿ ನೀಡಿದೆ. 10 ಸಾವಿರ ಶುಲ್ಕ ಪಡೆದು ಕಾರ್ಯಕ್ರಮದ ವೇಳೆ ಯಾವದೇ ಗಲಭೆಗೆ ಅವಕಾಶ ನೀಡಬಾರದು. ಅಕಸ್ಮಾತ್ ಯಾವುದೇ ಗಲಾಟೆಯಾಗಿ ಆಸ್ತಿ ಹಾನಿಯಾದ್ರೆ, ಆಯೋಜಕರೇ ಜವಾಬ್ದಾರಿ ಎಂದು ಕಠಿಣ ಷರತ್ತು ವಿಧಿಸಿ ಅನುಮತಿ ನೀಡಿದೆ.