ಗದಗ :ತಿಮ್ಮಾಪುರ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ಕೃಷಿ ಇಲಾಖೆ ಹಾಗೂ ಪ್ರಿಯದರ್ಶಿನಿ ಸ್ವಯಂ ಉದ್ಯೋಗ ತರಬೇತಿ ಹಾಗೂ ಗ್ರಾಮೀಣ ಸೇವಾ ಸಂಸ್ಥೆ ರೋಣ ಇವರ ಸಂಯೋಗದಲ್ಲಿ ಜಲಾನಯನ ಅಭಿವೃದ್ಧಿ ಮೂಲಕ ಬರಗಾಲ ತಡೆಗಟ್ಟುವಿಕೆ ಯೋಜನೆ ಅಡಿಯಲ್ಲಿ ಉದ್ಯಮಶೀಲತಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಿಜಯಲಕ್ಷ್ಮಿ ಹುಡಿದವರು, ಅನ್ನಪೂರ್ಣ ಮಾದರಿ, ವಿಶಾಲಾಕ್ಷಿ ಕಮ್ಮಾರ್ ಹಾಗೂ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಕೃಷಿ ಅಧಿಕಾರಿಗಳು ವೀರಣ್ಣ ಗಡಾದ ಹಾಗೂ ತಿಮ್ಮಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ನೀಲಪ್ಪ ಗಾಜಿ ಉಪಾಧ್ಯಕ್ಷರು ಅಕ್ಕಮ್ಮ ಹಾಗೂ ಸದಸ್ಯರು ಬಸವರಾಜ್ ಯಲಬುರ್ಗಾ ಮತ್ತು ಮಾಜಿ ಅಧ್ಯಕ್ಷರು ಹಾಗೂ ರೈತ ಸಂಘದ ಅಧ್ಯಕ್ಷರಾದಂತಹ ಯಲ್ಲಪ್ಪ ಬಾಬರಿಯವರು ಹಾಗೂ ಜಲಾನಯನ ಇಲಾಖೆಯ ಸಿಬ್ಬಂದಿಗಳಾದ ವಿನಯ್ ಕುಮಾರ್ ಬಂಟಗೌಡ್ರ ಹಾಗೂ ವೆಂಕಟೇಶ್ ಪೂಜಾರ ಪಾಲ್ಗೊಂಡಿದ್ದರು. ಈ ಒಂದು ಕಾರ್ಯಕ್ರಮದಲ್ಲಿ ಮೊದಲಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕೇಕ ಕಟ್ಟ ಮಾಡುವ ಮೂಲಕ ಉದ್ಘಾಟಿಸಲಾಯಿತು. ನಂತರ ಕಾರ್ಯಕ್ರಮದಲ್ಲಿ ಆಗಮಿಸಿದಂತಹ ಸಾಧಕೀಯರಿಗೆ ಸನ್ಮಾನಿಸಲಾಯಿತ್ತು. ಸಾಧಕೀಯರು ಅವರು ಮಹಿಳೆಯರಿಗೆ ಸ್ಪೂರ್ತಿದಾಯಕವಾದಂತ ಮಾತುಗಳನ್ನು ಆಡಿ ಅಲ್ಲಿ ನರೆದಂತಹ ಮಹಿಳೆಯರನ್ನು ಸ್ಪೂರ್ತಿ ತುಂಬಿದರು. ನಂತರ ಕೃಷಿ ಅಧಿಕಾರಿಗಳು ಮಾತನಾಡಿ ಮಹಿಳಾ ದಿನಾಚರಣೆಯ ಆಚರಿಸುವ ಉದ್ದೇಶ ಹಾಗೂ ಮಹಿಳೆಯರ ಸಮಾನತೆಯ ಕುರಿತು ಮಾತನಾಡಿದರು. ಹಾಗೂ ಮಹಿಳೆಯರಿಗೆ ಭಾಗವಹಿಸುವಿಕೆ ಅತಿ ಮುಖ್ಯ ಆ ಒಂದು ಭಾಗವಿಸುವುದರಿಂದ ಧೈರ್ಯ ಮನಸಲ್ಲಿನ ಭಯ ಕಳೆದು ಹೋಗುತ್ತದೆ ಆದ್ದರಿಂದ ಹೆಚ್ಚು ಸಾಧನೆ ಮಾಡಬಹುದು ಎಂದು ತಿಳಿಸಿದರು. ನಂತರ ಯಲ್ಲಪ್ಪ ಬಾಬರಿಯವರು ಮಾತನಾಡಿ ಕಾರ್ಯಕ್ರಮದ ಕುರಿತು ಉದ್ದೇಶಿಸಿ ಮಾತನಾಡಿದರು.

