ಹುಬ್ಬಳ್ಳಿ – ಈದ್ಗಾ ಮೈದಾನದಲ್ಲಿ ಕಾಮಣ್ಣ ಪ್ರತಿಷ್ಠಾಪನೆ ವಿಚಾರವಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರಮನ್ ಗುಪ್ತಾ ಮಾತನಾಡಿದ್ದಾರೆ. ಆಯೋಜಕರು ಕನಿಷ್ಠ 10 ದಿನ ಮೊದಲೇ ಮನವಿ ಕೊಡಬೇಕಿತ್ತು. ಏಕಾಏಕಿ ಕೊಟ್ಟಿರೋದ್ರಿಂದ ದೊಡ್ಡ ನಗರವಾದ ಕಾರಣ ಬಂದೋ ಬಸ್ತ ಗೆ ಅನಿವಾರ್ಯವಾಗಿರುವುದರಿಂದಾ ಸಮಸ್ಯೆಯಾಗುತ್ತದೆ. ಮೊದಲೇ ಮನವಿ ಕೊಟ್ಟಿದ್ರೆ, ಎಲ್ಲೆಲ್ಲಿ ಪೊಲೀಸ್ ನಿಯೋಜನೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡ್ತಿದ್ವಿ.
ಈಗಾಗಲೇ ನಗರದಲ್ಲಿ 472 ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.ಆದ್ರೆ ಇವೆಲ್ಲ ಒಂದೇ ದಿನ ಪ್ರತಿಷ್ಠಾಪನೆ ಆಗಿವೆ. ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಕಾನೂನು ಸುವ್ಯವಸ್ಥೆ ವಿಚಾರವಾಗಿ ಮಾಹಿತಿ ಬಂದಿದೆ. ಒಂದು ದಿನ ಆಗಲಿ, ಒಂದು ಕ್ಷಣ ಆಗಲಿ ಅಷ್ಟೇ ಬಂದೋ ಬಸ್ತ್ ಮಾಡಬೇಕಾಗುತ್ತೆ. ಹಲವು ಅನುಮಾನಕ್ಕೆ ಕಾರಣವಾಗಿರುವುದರಿಂದಾ, ಗುಪ್ತಚರ ಇಲಾಖೆ ಮೂಲಗಳ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಬೇರೆ ಬೇರೆ ಮಾಹಿತಿಗಳು ಬಂದಿವೆ ಹೀಗಾಗಿ ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.