ಮಾರ್ಚ್ 12ರಂದು ಮಂಡ್ಯ ಜಿಲ್ಲೆಗೆ ಪ್ರಧಾನಮಂತ್ರಿಗಳು ಆಗಮಿಸಲಿದ್ದಾರೆ.ಮಧ್ಯಾಹ್ನ 12 ಗಂಟೆಗೆ ದಶಪಥ ರಸ್ತೆಯಾದ ಬೆಂಗಳೂರು- ಮೈಸೂರು ಎಕ್ಸಪ್ರೆಸ್ ವೇ ಅನ್ನು ಉದ್ಘಾಟಿಸಲಿದ್ದಾರೆ. ಬಳಿಕ ಮಂಡ್ಯ ಜಿಲ್ಲೆ ಮದ್ದೂರು ಸಮೀಪದಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಆಗಮನದ ಹಿನ್ನಲೆಯಲ್ಲಿ ಸಕ್ಕರೆ ನಾಡು ಮಂಡ್ಯ ಕೇಸರಿಮಯವಾಗಿದ್ದು, ಮಂಡ್ಯ ನಗರದಲ್ಲಿ ಮೋದಿಯವರು ರೋಡ್ ಶೋ ನಡೆಸಿದ್ದಾರೆ.
