ಧಾರವಾಡ: ನಾಲೈದು ಜನ ಶಾಸಕರಿಗೆ ಈ ಬಾರಿ ಟಿಕೆಟ್ ತಪ್ಪಬಹುದು ಎಂಬ ಯಡಿಯೂರಪ್ಪನವರ ಹೇಳಿಕೆಗೆ ಶಾಸಕ ಅರವಿಂದ ಬೆಲ್ಲದ ಕೂಡ ಪುಷ್ಠಿ ನೀಡಿದ್ದಾರೆ .ಧಾರವಾಡದಲ್ಲಿ ಮಾತನಾಡಿದ ಅವರು, ಹಳೆಯ ಹಾಗೂ ವಯಸ್ಸಾದ ಶಾಸಕರು ಕೂಡ ಇದ್ದಾರೆ. ವಯಸ್ಸಾದ ಕಾರಣ ಅವರು ಟಿಕೆಟ್ ಬೇಡ ಎನ್ನಬಹುದು ಅಥವಾ ಪಕ್ಷ ಅವರಿಗೆ ಟಿಕೆಟ್ ನೀಡದೇ ಇರಬಹುದು. ತಾವಾಗಿಯೇ ಅವರು ಟಿಕೆಟ್ ಬೇಡ ಎನ್ನಬಹುದು. ಅಂತಹವರು 121 ಕ್ಷೇತ್ರದಲ್ಲಿ ನಾಲೈದು ಜನ ಇದ್ದೇ ಇರುತ್ತಾರೆ. ಅದನ್ನೇ ಯಡಿಯೂರಪ್ಪನವರು ಹೇಳಿರಬಹುದು. ಅದರಲ್ಲಿ ತಪ್ಪೇನಿದೆ? ಎಂದರು. ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಹಳಬರಿಗೆ ಟಿಕೆಟ್ ತಪ್ಪಬಹುದು ಎಂಬರ್ಥದಲ್ಲಿ ಯಡಿಯೂರಪ್ಪನವರು ಹೇಳಿದ್ದಾರೆ ಎಂದರು.
