Breaking News

ಸಂಸದ ಧೃವನಾರಾಯಣ್ ಅವರ ಅಗಲಿಕೆಗೆ ಭಾವುಕರಾದ ಸಿಎಂ

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಮಾಜಿ ಸಂಸದ ಧೃವನಾರಾಯಣ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿದೆ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಚಿಂತನೆಯಲ್ಲಿ ಸಾಮ್ಯ ಧೃವ ನಾರಾಯಣ್ ಅವರು ನನ್ನ ಆತ್ಮೀಯ ಸ್ನೇಹಿತರಾಗಿದ್ದರು. ವಿರೋಧ ಪಕ್ಷದಲ್ಲಿದ್ದರೂ ಕೂಡ ರಾಜ್ಯದ ಅಭಿವೃದ್ಧಿಯಲ್ಲಿ ಸಾಕಷ್ಟು ಬಾರಿ ಮುಕ್ತವಾಗಿ ಚರ್ಚೆ ಮಾಡಿದ್ದೆವು. ಅವರ ಚಿಂತನೆ ಮತ್ತು ನಮ್ಮ ಚಿಂತನೆಯಲ್ಲಿ ಸಾಮ್ಯವಿತ್ತು. ಎರಡು ಬಾರಿ ಶಾಸಕರಾಗಿ ಹಾಗೂ ಸಂಸದರಾಗಿದ್ದ ಅವರು ಈ ರಾಜ್ಯದ ಅಭಿವೃದ್ಧಿ, ಪರಿಶಿಷ್ಟ ಜನಾಂಗದ ಬಗ್ಗೆ ಹಾಗೂ ಚಾಮರಾಜನಗರದ ಬಗ್ಗೆ ಶ್ರೇಷ್ಠ ಕಳಕಳಿ ವ್ಯಕ್ತಪಡಿಸುತ್ತಿದ್ದರು. ಒಳ್ಳೆ ಕೆಲಸ ಮಾಡಿದ್ದರು. ಅವರಿಗೆ ಹೃದಯಾಘಾತವಾಗಿ ಸಾವು ಉಂಟಾಗಿದ್ದು ಆಘಾತ ತಂದಿದೆ. ಬದ್ಧತೆಯುಳ್ಳ ರಾಜಕಾರಣಿಯನ್ನು ಕಳೆದುಕೊಂಡಿದ್ದು, ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

Share News

About BigTv News

Check Also

ಮದುವೆಯಾಗುವ ರೈತರ ಹೆಣ್ಣು ಮಕ್ಕಳಿಗೆ ಸರ್ಕಾರಿ ಕೆಲಸ ನೀಡಬೇಕು

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿವೆ. ಈ ನಡುವೆ ಚುನಾವಣೆಯಲ್ಲಿ ರೈತರ ಪ್ರಣಾಳಿಕೆಯನ್ನು …

Leave a Reply

Your email address will not be published. Required fields are marked *

You cannot copy content of this page