ಹುಬ್ಬಳ್ಳಿ ನಗರದಲ್ಲಿ ರಂಗ ಪಂಚಮಿ ಹಿನ್ನಲೆಯಲ್ಲಿ ಮಾನ್ಯ ಪೊಲೀಸ್ ಆಯುಕ್ತರು ಮಧ್ಯ ಮಾರಾಟ ನಿಷೇಧಾಜ್ಞೆ ಹೊರಡಿಸಿದ್ದರು. ನಿಷೇಧಾಜ್ಞೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದಾಗ, ಹುಬ್ಬಳ್ಳಿ ನಗರದ ಕಸಬ ಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ನೇಕಾರ ನಗರದಲ್ಲಿ ಅಂಬಿಕಾ ಸಾವಜಿ ಖಾನಾವಳಿಯಲ್ಲಿ ಅಕ್ರಮವಾಗಿ ಯಾವುದೇ ಲೈಸೆನ್ಸ್ ಪರ್ಮಿಟ್ ಇಲ್ಲದೆ ಅನಧಿಕೃತವಾಗಿ ಮಧ್ಯ ಮಾರಾಟದಲ್ಲಿ ತೊಡಗಿದ್ದು ಕಂಡು ಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕಾಶ್ ಬಸವ ಮತ್ತು ಕಾಶೀನಾಥ್ ಪವಾರ್ ಎಂಬುವವರು ಅನಧಿಕೃತವಾಗಿ ಮಧ್ಯ ಮಾರಾಟ ಮಾಡಿದ್ದು, ಒರಿಜಿನಲ್ ಚಾಯ್ಸ್ ,ಮ್ಯಾಕಿನ್ ಟೋಶ ,ವಿಸ್ಕಿಗಳ ಟೆಟ್ರಾ, ಪ್ಯಾಕ್ ಹಾಗೂ ಕಿಂಗ್ ಫಿಶರ್ ಪವರ್ ಕೂಲ್ ಬಿಯರ್ ಬಾಟಲ್ ಗಳನ್ನು ಮಾರಾಟ ಮಾಡಿದ್ದು, ಬಂದ ನಗದು ಹಣ ರೂಪಾಯಿ 11200 ಹಾಗೂ ಒಟ್ಟು 47384 ರೂಪಾಯಿಯ ಮೌಲ್ಯದ ಮದ್ಯ ಹಾಗೂ ನಗದು ಹಣವನ್ನು ಜಪ್ತಿ ಮಾಡಿದ್ದಾರೆ.
ಶ್ರೀ ರಮಣಗುಪ್ತ ಐಪಿಎಸ್ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡರವರು ಹಾಗೂ ಹಿರಿಯ ಅಧಿಕಾರಿಗಳು ಸದರಿ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದ ಸಿಸಿಬಿಯ ಅಧಿಕಾರಿ ಹಾಗೂ ಸಿಬ್ಬಂದಿಗಳಾದ ಪಿಐ ಶರಣಗೌಡ ಎಂ. ನ್ಯಾಮಣ್ಣವರ, ಪಿವಿ ರಮೇಶ ಕಾಂಬಳೆ, ಎಎಸ್ಐ ಬಿ.ಎನ್.ಲಂಗೋಟಿ, ಮಾರುತಿ ಭಜಂತ್ರಿ, ಅನೀಲ ಹುಗ್ಗಿ, ಉಮೇಶ ದೊಡ್ಡಮನಿ, ರಾಜೀವ ಜಿಪ್ಪಂಡೇರ, ಎಫ್.ಬಿ.ಕದ್ರಿ, ಆರ್.ಎಸ್.ಗುಂಜಳರವರ ಕರ್ತವ್ಯವನ್ನು ಪ್ರಶಂಸಿಸುತ್ತಾರೆ.