ಹುಬ್ಬಳ್ಳಿ: ಧಾರವಾಡದ ಐಐಟಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ, ಇಂದು ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ವತಿಯಿಂದ, ಬೈಕ್ ರ್‌ಯಾಲಿ ಮಾಡಿದರು. ಹು-ಧಾ ಪೂರ್ವ ಅಧ್ಯಕ್ಷರಾದ ಪ್ರಭು ನವಲಗುಂದಮಠ ರವರ ಅಧ್ಯಕ್ಷತೆಯಲ್ಲಿ ಮತ್ತು ಬಿಜೆಪಿ ಹಿರಿಯ ಮುಖಂಡರಾದ ಶಂಕರಣ್ಣ ಬಿಜವಾಡ ರವರ ನೇತೃತ್ವದಲ್ಲಿ, ನ್ಯೂ ಇಂಗ್ಲಿಷ್ ಮ್ಯಾದರ ಓಣಿಯಿಂದ ಹಳೇ ಹುಬ್ಬಳ್ಳಿ ನೇಕಾನಗರದ ವರೆಗೆ ಬೃಹತ್ ಬೈರ್ ಯಾಲಿ ಮಾಡಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಪ್ರಭು ನವಲಗುಂದಮಠ, ಉಪಾಧ್ಯಕ್ಷರಾದ ಅನುಪ್ ಬಿಜವಾಡ, ಬಿಜೆಪಿ ಹಿರಿಯ ಮುಖಂಡರಾದ ಶಂಕರಣ್ಣ ಬಿಜವಾಡ, ರಂಗಾ ಬದ್ದಿ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ವಿನಯ ಸಜ್ಜನರ, ರಾಜಕುಮಾರ ಕಾಮರೆಡ್ಡಿ, ಹು-ಧಾ ಪೂರ್ವ ವಕ್ತಾರ ಲಕ್ಷ್ಮೀಕಾಂತ ಘೋಡಕೆ, ಮಂಜುನಾಥ ಕಾಟಕರ, ನೀಲಕಂಠ ತಡಸದಮಠ, ಸಂಗಮ ಹಂಜಿ, ಮಂಜುನಾಥ ಕಲಾಲ, ಗೋಪಾಲ ಕಲ್ಲೂರ, ಮಿಥುನ ಚವ್ಹಾಣ, ರಾಜು ಕೋರಾಣ್ಯಮಠ, ಡಾ ರವೀಂದ್ರ ಎಲಖಾನ, ಶ್ರೀನಿವಾಸ ತಾತುಸ್ಕರ, ತಾಜುದ್ದೀನ್ ಮುನವಳ್ಳಿ, ಜಾಕೀಯ ಹೊಸೂರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
