Breaking News

ಕರ್ನಾಟಕದಲ್ಲಿ ಮೋದಿ ಸುನಾಮಿ ಶುರುವಾಗಿದೆ- ಸಿಎಂ

ಹುಬ್ಬಳ್ಳಿಯಲ್ಲಿ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಸೋಮಣ್ಣ ನಾನು ಹಳೆಯ ಸ್ನೇಹಿತರು ಅವರ, ನಮ್ಮ ಭೇಟಿ ಕೇವಲ ಔಪಚಾರಿಕ. ಸೋಮಣ್ಣ ನಮ್ಮ ಜೊತೆಗಿದಾರೆ, ನಮ್ಮ ಜೊತೆಗೇ ಇರ್ತಾರೆ ಎಂದು ಹೇಳಿದ್ದಾರೆ. ಇನ್ನೂ ಪ್ರಧಾನಿ ಬಗ್ಗೆ ಮಾತನಾಡಿದ್ದು, ಪ್ರಧಾನಿ ಮೋದಿ ಅವರು ರಾಜ್ಯದ ಹಲವೆಡೆ ಪ್ರಚಾರ ಮಾಡಿದ್ದಾರೆ .ಅವರು ಬಂದು ಹೋಗಿದ್ದರಿಂದ ಮೋದಿ ಮತ್ತು ಬಿಜೆಪಿ ಪರ ಒಲವು ಹೆಚ್ಚಾಗಿದೆ. ಕರ್ನಾಟಕದಲ್ಲಿ ಮೋದಿ ಸುನಾಮಿ ಶುರುವಾಗಿದೆ ಎಂದರು. ಕಾಮಗಾರಿಗಳ ಕ್ರೆಡಿಟ್ ವಾರ್ ವಿಚಾರಕ್ಕೆ ಸಹಜವಾಗಿಯೇ ಕ್ರೆಡಿಟ್ ವಾರ್ ಇದೆ. ಪಕ್ಕದ ಮನೆಯವಳು ಗಂಡು ಹಡೆದರೆ ಇವರು ಪೇಡೆ ಹಂಚುವ ಕೆಲಸ ಮಾಡ್ತಿದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಗೆ ಟಾಂಗ್ ಮಾಡಿದ್ದಾರೆ. ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಮುಷ್ಕರ ಕರೆ ವಿಚಾರವಾಗಿ, ಅವರ ಜೊತೆ ನಮ್ಮವರು ಮಾತುಕತೆ ನಡೆಸಿದ್ದಾರೆ. ಇಂಧನ ಸಚಿವರು ಚರ್ಚೆಯಲ್ಲಿದ್ದಾರೆ ಕೂಡಲೇ ಅದನ್ನು ಬಗೆಹರಿಸುತ್ತಾರೆ. ನಮ್ಮ ಸಚಿವರು ಈಗಾಗಲೇ ಎರಡು ಸುತ್ತಿನ ಮಾತುಕತೆ ಮಾಡಿದ್ದಾರೆ. ಎಲ್ಲ ವಿವರಗಳನ್ನ ಹಂಚಿಕೊಳ್ಳೋಕೆ ಆಗಲ್ಲ ಎಂದರು. ಮೋದಿ ದೇವರು ಎಂಬ ಕಾಂಗ್ರೆಸ್ ಟೀಕೆ ವಿಚಾರವಾಗಿ ಮಾತನಾಡಿದ್ದು, ನಾವು ಮೋದಿ ಅವರನ್ನ ದೇವರು ಅಂದಿಲ್ಲ. ಮೋದಿ ಅವರೂ ತಮ್ಮನ್ನು ದೇವರು ಅಂತ ಅಂದುಕೊಂಡಿಲ್ಲ. ನರೇಂದ್ರ ಮೋದಿ ಅವರು ಒಬ್ಬ ಮಹಾನ್ ನಾಯಕ .ಮೋದಿ ಗಡಿಯಲ್ಲಿ ಭದ್ರತೆ ನೀಡಿ ಅತ್ಯಂತ ಕಷ್ಟಕಾಲದಲ್ಲಿ ಭಾರತವನ್ನು ಎತ್ತಿ ಹಿಡಿದಿದ್ದಾರೆಆಂತರಿಕ ಸುರಕ್ಷತೆ ತಂದು ದೇಶ ಸುಭದ್ರಗೊಳಿಸಿದ್ದಾರೆ. ದೇಶಕ್ಕೆ ಮೋದಿ ಆಪತ್ಬಾಂಧವ ಅಂತಾ ಹೇಳಿದರು. ರೌಡಿಶೀಟರ್ ಫೈಟರ್ ರವಿಗೆ ಮೋದಿ ನಮಸ್ಕಾರ ಮಾಡಿ, ಪ್ರಧಾನಿ ಹುದ್ದೆಗೆ ಕಳಂಕ ತಂದಿದ್ದಾರೆ ಎಂಬ ಕಾಂಗ್ರೆಸ್ ಮಾತಿಗೆ, ಸಾರ್ವಜನಿಕವಾಗಿ ಯಾರೇ ಬಂದ್ರೂ ಮೋದಿ ನಮಸ್ಕಾರ ಮಾಡ್ತಾರೆ ಎಂದು ತಿರುಗೆಟು ನೀಡಿದ್ದಾರೆ.

Share News

About admin

Check Also

Featured Video Play Icon

ದರ್ಶನ ಕೇಸ್ ಸುದ್ದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ ಖಂಡನೀಯ: ಇಂದ್ರಜಿತ್ ಲಂಕೇಶ್..!

ಅಪರಾಧಿಗಳಿಗೆ ರಾಜಮರ್ಯಾದೆ ನೀಡಬಾರದು: ಪತ್ರಕರ್ತರ ಪರವಾಗಿ ಹೋರಾಟಕ್ಕೆ ನಾನು ಸಿದ್ದ ಇಂದ್ರಜಿತ್ ಲಂಕೇಶ್..!!! ಹುಬ್ಬಳ್ಳಿ: ಸುದ್ಧಿ ಮಾಡಲು ಹೋಗಿರುವ ಪತ್ರಕರ್ತರ …

Leave a Reply

Your email address will not be published. Required fields are marked *

You cannot copy content of this page