ಹುಬ್ಬಳ್ಳಿ: ಸರ್ಕಾರ ಸಾರಿಗೆ ಇಲಾಖೆ ನೌಕರರ ಬೇಡಿಕೆ ಇಡೇರಿಸುದಿರಲಿ, ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರಿಗೂ ಗ್ರ್ಯಾಚುಟಿ ಹಣ ಕೊಟ್ಟಿಲ್ಲ. ಸಾರಿಗೆ ಇಲಾಖೆಯ ನಡುವಳಿಕೆಯಿಂದ ಬೇಸತ್ತು ಸಾರಿಗೆ ನಿವೃತ್ತ ನೌಕರನೋರ್ವ ಇದೀಗ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾನೆ. ಒಂದು ಕಡೆ ಸರ್ಕಾರಕ್ಕೆ ಶಾಪ ಹಾಕ್ತಿರೋ ನಿವೃತ್ತ ಸಾರಿಗೆ ನೌಕರ.. ಇನ್ನೊಂದು ಕಡೆ ನಿವೃತ್ತಿ ನಂತರದ ಗ್ರ್ಯಾಚುಟಿ ಹಣಕ್ಕಾಗಿ ಮೋದಿಗೆ ಬರೆದಿರೋ ಪತ್ರ. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಗೋಕುಲ್ ರಸ್ತೆಯ ಕಿರ್ಲೋಸ್ಕರ್ ಲೇಔಟ್ ನ ನಿವಾಸಿ ಹನಮಂತ ಆರ್ ಅಂಕುಶ್ ತನಗೆ ಸಿಗಬೇಕಾದ ಗ್ರ್ಯಾಚುಟಿ ಹಣ ನೀಡದ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ದ ರೋಸಿ ಹೋಗಿದ್ದಾನೆ. 36 ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡಿ ಕಳೆದ ವರ್ಷ ನಿವೃತ್ತರಾಗಿರೋ ಹನಮಂತ ಗೆ ಇಲಾಖೆಯಿಂದ ಬರಬೇಕಾರ ಗ್ರ್ಯಾಚುಟಿ ಹಾಗೂ ರಜೆ ನಗದೀಕರಣದ ಸುಮಾರು 18 ಲಕ್ಷ ಹಣ ಬಂದಿಲ್ಲ.
ಹುಬ್ಬಳ್ಳಿಯ ಸಾರಿಗೆ ಇಲಾಖೆ ಅಧಿಕಾರಿಗಳ ಬಳಿ ಅಲೆದಾಡಿ ಅಲೆದಾಡಿ ಸುಸ್ತಾಗಿರೋ ಹನಮಂತ ಇದೀಗ ಮೋದಿ ಅವರಿಗೆ ಪತ್ತ ಬರೆದಿದ್ದಾನೆ.18 ಲಕ್ಷದಲ್ಲಿ ನನಗೆ 6.5 ಲಕ್ಷ ಅವಶ್ಯಕತೆ ಇದೆ ಹಣ ಕೊಡಿ ಎಂದು ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಮಾನವೀಯತೆ ಆಧಾರದ ಮೇಲೆ ಹನಮಂತ ತನಗೆ ಸಿಗಬೇಕಾದ ಹಣಕ್ಕೆ ಮೋದಿ ಹಾಗೂ ಸಿಎಮ್ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಹನಮಂತ ಮೋದಿಗೆ ಮನವಿ ಮಾಡಲು ಕಾರಣವೂ ಇದೆ. ನಿವೃತ್ತಿಯಾದ ಬಳಿಕ ಹನಮಂತ ಗೆ ಜೀವನ ನಡೆಸೋದು ತುಂಬಾ ಕಷ್ಟವಾಗಿದೆ. ಅಲ್ದೆ ಕಿವಿ ಆಪರೇಶನ್ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಹಣದ ಅವಶ್ಯಕತೆ ಇದೆ.ಇದೆ ಕಾರಣಕ್ಕೆ ಹುಬ್ಬಳ್ಳಿ ಸಾರಿಗೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಭರತ್ ಗೆ ಹನಮಂತ ಅಂಕುಶ್ ಹಲವಾರು ಬಾರಿ ಹಣ ಕೊಡಿ ಎಂದು ಮನವಿ ಮಾಡಿಕೊಂಡಿದ್ದ. ಆದ್ರೆ ಇದುವರೆಗೂ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಇನ್ನು ತಾನು ದುಡಿದ ಹಣ ಕಷ್ಟಕಾಲದಲ್ಲಿ ಸಿಗದೆ ಇರೋದಕ್ಕೆ ನಿವೃತ್ತ ನೌಕರ ಹನಮಂತ ಬಿಜೆಪಿ ಸರ್ಕಾರಕ್ಕೆ ಶಾಪ ಹಾಕ್ತಿದಾರೆ.
ಹನಂಮತ ಕಳೆದ 36 ವರ್ಷಗಳಿಂದ ಹುಬ್ಬಳ್ಳಿಯ ಸಾರಿಗೆ ವಿಭಾಗೀಯ ಕಚೇರಿಯಲ್ಲಿ ಕೆಲಸ ಮಾಡಿ ಕಳೆದ ವರ್ಷ ನಿವೃತ್ತರಾಗಿದ್ದಾರೆ. ಇತ್ತ ನೌಕರಿಯೂ ಇಲ್ಲದೆ, ಇತ್ತ ದುಡಿದ ಹಣವೂ ಇಲ್ಲದೆ ನಿವೃತ್ತ ನೌಕರಿಗೆ ಮನೆ ನಡೆಸೋದು ತುಂಬಾ ಕಷ್ಟದ ಕೆಲಸವಾಗಿದೆ. ಒಂದು ಕಡೆ ತನ್ನ ಆರೋಗ್ಯ ಸಮಸ್ಯೆ ,ಇನ್ನೊಂದು ಕಡೆ ಮಕ್ಕಳ ಶಿಕ್ಷಣಕ್ಕೆ ಹಣದ ಅವಶ್ಯಕತೆ ಇದೆ ಎಂದು ಗೋಗರೆದರೂ ಅಧಿಕಾರಿಗಳು ಹಣ ಕೊಡ್ತಿಲ್ಲ. ಇದು ಹನಮಂತ ಅವರ ಒಬ್ಬರ ಕಥೆ ಅಂದುಕೊಳ್ಳಬೇಡಿ NWKSRTC ವ್ಯಾಪ್ತಿಯ ಒಟ್ಟು 1764 ಜನ ನಿವೃತ್ತ ನೌಕರರಿಗೆ ಸಾರಿಗೆ ಇಲಾಖೆ ಹಣ ನೀಡಬೇಕಾಗಿದೆ. 2021 ರಿಂದ 2023 ರ ವರೆಗೂ ಸುಮಾರು 240 ಕೋಟಿಗೂ ಅಧಿಕ ಹಣ ಸಾರಿಗೆ ಇಲಾಖೆ ಬಾಕಿ ಉಳಿಸಿಕೊಂಡಿದೆ. ಇದೀಗ NWKSRTC ವ್ಯಾಪ್ತಿಯ 1764 ಜನ ನಿವೃತ್ತ ನೌಕರರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ಹೇಳೋದು ಹೀಗೆ….
ಒಟ್ಟಾರೆ ಸಾರಿಗೆ ಇಲಾಖೆ ಆರ್ಥಿಕ ಸಂಕಷ್ಟದ ನೆಪ ಹೇಳಿ ನಿವೃತ್ತ ನೌಕರರ ಜೀವನದ ಜೊತೆ ಚೆಲ್ಲಾಟ ಆಡ್ತಿದೆ.. ಪ್ರಧಾನಿಗೆ ಪತ್ರ ಬರೆದರೂ ಸಂಕಷ್ಟದಲ್ಲಿರೋ ನಿವೃತ್ತ ನೌಕರನಿಗೆ ಸಹಾಯ ಸಿಕ್ಕಿಲ್ಲ..ಸರ್ಕಾರವೂ ಸಾರಿಗೆ ಇಲಾಖೆ ಕೆಲಸ ಮಾಡಿಸಿಕೊಂಡು ನಡು ನೀರಿನಲ್ಲಿ ಕೈ ಬಿಟ್ಟಿದಂತೂ ಸತ್ಯ…