ಹುಬ್ಬಳ್ಳಿ: ಇಂದು ಕರ್ನಾಟಕದ ಯುವ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಹುಬ್ಬಳ್ಳಿಯ ನಗರದ ಚನ್ನಮ್ಮ ಸರ್ಕಲ್ ಬಳಿ ಆಟೋ ಚಾಲಕರು ಬೃಹತ್ ಕೇಕ್ ಕತ್ತರಿಸಿ ಆಚರಣೆ ಮಾಡಿದರು.
ಉತ್ತರ ಕರ್ನಾಟಕದ ಆಟೋ ಚಾಲಕರ ಸಂಘ ಅಪ್ಪು ಹುಟ್ಟು ಹಬ್ಬ ಆಚರಣೆ ಮಾಡಿ,ಆಟೋದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರದ ಕಟೌಟ್ ಹಾಕಿ, ಚನ್ನಮ್ಮ ಸರ್ಕಲ್ ನಿಂದ ಪಾಲಿಕೆ ವರೆಗೆ ಮೆರವಣಿಗೆ ಮಾಡಿದರು. ಹುಬ್ಬಳ್ಳಿಯಲ್ಲಿ ಪುನೀತ್ ಅವರ ಪುತ್ಥಳಿಯನ್ನ ನಿರ್ಮಿಸಬೇಕೆಂದು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದರು.