ಧಾರವಾಡ: ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಇಂಗಳಗುಂದಿ ಗ್ರಾಮದ ವಿಚಾರಣಾಧೀನ ಕೈದಿ ವಸಂತ ತಂಬಾಕದ (40) ಎಂಬಾತ ಧಾರವಾಡದ ಡಿಮಾನ್ಸ್‌ನಲ್ಲಿ ಸಾವಿಗೀಡಾಗಿದ್ದಾನೆ.
ಸುಮಾರು 17 ಕಳ್ಳತನ ಪ್ರಕರಣದಡಿ ವಸಂತನನ್ನು ಯಲ್ಲಾಪುರ ಠಾಣೆ ಪೊಲೀಸರು ಬಂಧಿಸಿ, ಹಳಿಯಾಳ ಕಾರಾಗೃಹದಲ್ಲಿಟ್ಟಿದ್ದರು. ಎಲ್ಲಾ ಪ್ರಕರಣಗಳಲ್ಲೂ ಜಾಮೀನು ಪಡೆದುಕೊಂಡಿದ್ದ ವಸಂತನನ್ನು ಪೊಲೀಸರು ಕೇವಲ ಒಂದು ಪ್ರಕರಣದಡಿ ಬಂಧಿಸಿದ್ದರು. ಮಾ.6 ರಂದು ಕೈದಿ ವಸಂತನನ್ನು ಪೊಲೀಸರು ಚಿಕಿತ್ಸೆಗೆಂದು ಧಾರವಾಡದ ಡಿಮಾನ್ಸ್ಗೆ ಕರೆದುಕೊಂಡು ಬಂದಿದ್ದರು. ಆದರೆ,ಇದೀಗ ವಸಂತ ಆಸ್ಪತ್ರೆಯಲ್ಲೇ ಅಸುನೀಗಿದ್ದಾನೆ.