ಹುಬ್ಬಳ್ಳಿ : 20 ರಂದು ರಾಹುಲ್ ಗಾಂಧಿ ಬೆಳಗಾವಿಗೆ ಬೃಹತ್ ಯುವ ಕ್ರಾಂತಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಸಮಾವೇಶದಲ್ಲಿ ಸುರ್ಜೇವಾಲಾ,ವೇಣುಗೋಪಾಲ, ಸಿದ್ದರಾಮಯ್ಯ ಡಿಕೆಶಿವಕುಮಾರ್, ಪರಮೇಶ್ವರ,ಮುನಿಯಪ್ಪ,ಎಮ್ ಬಿ ಪಾಟೀಲ್ ಭಾಗಿಯಾಗಲಿದ್ದಾರೆ. ಸುಮಾರು 2 ಲಕ್ಷ ಜನ ಕಾರ್ಯಕ್ರಮದಲ್ಲಿ ಸೇರಲಿದ್ದು,ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ರಾಜ್ಯದ ಯುವ ಜನತೆಗೆ ಸಂದೇಶ ಕೊಡಲಿದ್ದಾರೆ. ಮತ್ತು ಭಾರತ ಜೋಡೋ ಯಾತ್ರೆ ವೇಳೆ ಯುಕವರು ಅನ್ಯಾಯದ ಬಗ್ಗೆ ರಾಹುಲ್ ಗಾಂಧಿಗೆ ತಿಳಸಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಕಾರ್ಯಾದ್ಯಕ್ಷ ಸಲೀಂ ಅಹಮ್ಮದ್ ಹೇಳಿದ್ದಾರೆ.
ರಾಜ್ಯದ 224 ಕ್ಷೇತ್ರಗಳಲ್ಲಿ ಸರ್ವೆ ಆಗಿದ್ದು,ಮೂರು ಸುತ್ತಿನ ಸ್ಕ್ರೀನಿಂಗ್ ಕಮೀಟಿ ಸಭೆ ಆಗಿದೆ. ಇಂಟರ್ನಲ್ ಸರ್ವೆ ಪ್ರಕಾರ 140 ಸೀಟ್ ಗಿಂತಲೂ ಅಧಿಕ ಮುಂದಿದೆ..ನಮ್ಮ ನಾಯಕರು 150 ಸೀಟ್ ಗೆಲ್ಲಲು ಸೂಚನೆ ನೀಡಿದ್ದಾರೆ ಎಂದರು. ಧಾರವಾಡ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಲ್ಲಿ ಗೆಲ್ತೀವಿ ಎಂದು ವಿಜಯ ಸಂಕಲ್ಪ ಯಾತ್ರೆ ಮಾಡ್ತಿದ್ದಾರೆ. ವಿಜಯ ಸಂಕಲ್ಪ ಯಾತ್ರೆ ಅಲ್ಲ ಕ್ಷಮೆ ಯಾತ್ರೆ ಮಾಡಬೇಕಿತ್ತು.ಬೆಲೆ ಏರಿಕೆ,ಬ್ರಷ್ಟಾಚಾರ ಮಾಡಿದ್ದೀವಿ ಎಂದು ಕ್ಷಮೇ ಯಾತ್ರೆ ಮಾಡಬೇಕಿತ್ತು.ಆದ್ರೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಾಡ್ತಿರೋದು ದುರ್ದೈವ. ರಾಜ್ಯದಲ್ಲಿ ರೌಡಿಗಳ ಸರ್ಕಾರ ಇದೆ. ಇವರಿಗೆ ಮತ ಕೇಳೋಕೆ ನೈತಿಕ ಹಕ್ಕಿಲ್ಲ ಎಂದು ಸಲೀಂ ಟೀಕಿಸಿದ್ದಾರೆ.
ಪ್ರಧಾನಿ ಫೈಟ್ ರವಿಗೆ ಕೈ ಮುಗದಿರೋದು ದೊಡ್ಡ ದುರ್ದೈವ. ಇದರ ಬಗ್ಗೆ ಚರ್ಚೆ ಯಾಗಬೇಕು.ಇದು ರೌಡಿಗಳು,ದಲ್ಲಾಳಿಗಳ ಸರ್ಕಾರ
23 ಸಾವಿರ ರೌಡಿಗಳಿಗೆ ಬಿಜೆಪಿ ಕ್ಲೀನ್ ಚಿಟ್ ಕೊಟ್ಟಿದೆ. 4 ವರ್ಷದಲ್ಲಿ 23 ಸಾವಿರ ರೌಡಿ ಶೀಟರ್ ಗೆ ಕ್ಲೀನ್ ಚೀಟ್ ಕೊಟ್ಟಿದ್ದಾರೆ. ರೌಡಿಗಳನ್ನ ಇಟ್ಕೊಂಡು ಚುನಾವಣೆ ಮಾಡೋಕೆ ಹೊರಟಿದ್ದಾರೆ.ಭಾರತೀಯ ಜನತಾ ಪಾರ್ಟಿ ಹಿರಿಯರ ಅಂದ್ರೆ ಕಸದ ಬುಟ್ಟಿ ಸಮಾನ..
ಯಡಿಯೂರಪ್ಪ ಯಾಕೆ ಕಣ್ಣೀರು ಹಾಕಿದ್ರು.ಕಣ್ಣೀರು ಹಾಕಿ ಯಡಿಯೂರಪ್ಪ ರಾಜೀನಾಮೆ ಕೊಟ್ರು. ಅವರ ಕಣ್ಣೀರ ಕಥೆ ಯಾರೂ ಮಾತಾಡಲ್ಲ. ಇದೀಗ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಅಂತೀದಾರೆ ಎಂದ ಸಲೀಂ ಅಹಮ್ಮದ್ ಕೀಡಿಕಾರಿದ್ದಾರೆ.