ಹುಬ್ಬಳ್ಳಿ: ಬಿಜೆಪಿ ಸರ್ಕಾರದಿಂದ ರಾಜ್ಯದ ಜನ ನೊಂದಿದ್ದಾರೆ, ಬೆಂದಿದ್ದಾರೆ. ಇದು ಲಂಚಾವತರಾದ ಸರ್ಕಾರ. ಈ ಸರ್ಕಾರದ ಆಯುಷ್ಯ ಮುಗಿತಾ ಬಂದಿದೆ. ಇನ್ನು 40 ದಿನ ಈ ಸರ್ಕಾರದ ಆಯುಷ್ಯ. ಇವತ್ತಿನ ಮಾಹಿತಿ ಪ್ರಕಾರ ಬಿಜೆಪಿ ಗೆಲ್ಲೋದು 40 ರಿಂದ 45 ಸೀಟ್ ಎಂದು ಸಲೀಂ ಅಹಮ್ಮದ್ ಹೇಳಿದ್ದಾರೆ.
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡದಂತೆ ಸಲಹೆ ನೀಡಿರೊ ವಿಚಾರವಾಗಿ ಮಾತನಾಡಿದ್ದು, ರಾಹುಲ್ ಗಾಂಧಿ ಸಲಹೆ ನೀಡಿರೋದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡ್ತೀದಿನಿ ಎಂದಿದ್ದಾರೆ.120 ರಿಂದ 125 ಜನರಿಗೆ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎಂದು ಹೇಳಿದರು.