ಹುಬ್ಬಳ್ಳಿ: ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದು, ನಾನು ಯಾವುದೇ ಕರಾರು ಇಲ್ಲದೇ ಕಾಂಗ್ರೆಸ್ ಸೇರಿದ್ದೇನೆ. ರಾಜ್ಯದಲ್ಲಿ ಮೂರು ವರ್ಷದಿಂದ ಜನ ವಿರೋಧಿ ಸರ್ಕಾರ ಇದೆ. ನನಗೆ ಬಹಳ ನೋವಾಗಿದೆ ಈ ನಿಟ್ಟಿನಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ ಎಂದು ಮೋಹನ್ ಲಿಂಬಿಕಾಯಿ ಹೇಳಿದರು.
2008 ರಲ್ಲಿ ನಾನು ಪದವೀಧರ ಕ್ಷೇತ್ರದಿಂದ ಗೆದ್ದಿದ್ದೆ. ಭಾರತೀಯ ಜನತಾ ಪಾರ್ಟಿ ಮುಖಂಡರು ಎಲ್ಲರೂ ಸೇರಿ ನನ್ನ ಚುನಾವಣೆಗೆ ನಿಲ್ಲಿಸಿದ್ದರು. 2013 ರಲ್ಲಿ ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದಾಗ ಯಾರೂ ಅವರ ಜೊತೆ ಹೋಗಲಿಲ್ಲ. ಕೆಲ ಮಂತ್ರಿಗಳು ಅವರಿಗೆ ಬಿಜೆಪಿ ಪಕ್ಷ ಕಟ್ಟಲು ಉತ್ತೇಜನ ನೀಡಿದರು. ಆದ್ರೆ ಅವರ ಜೊತೆ ಯಾರೂ ಹೋಗಲಿಲ್ಲ. ನಾನು ನನ್ನ ಅಧಿಕಾರ ಅವಧಿ ಒಂದೂವರೆ ವರ್ಷ ಇದ್ದರೂ ನಾನು ಯಡಿಯೂರಪ್ಪ ಜೊತೆ ಹೋದೆ ಎಂದು ಲಿಂಬಿಕಾಯಿ ಹೇಳಿದರು.
2014 ರಲ್ಲಿ ನನಗೆ ಟಿಕೆಟ್ ಕೊಡಲಿಲ್ಲ. 2020 ರಲ್ಲೂ ಕೊಡಲಿಲ್ಲ. 2022 ರಲ್ಲಿ ನೀವೇ ಅಭ್ಯರ್ಥಿ ಎಂದಿದ್ರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಮಗೆ ಟಿಕೆಟ್ ಎಂದಿದ್ದಾರೆ. ಚುನಾವಣೆ ಬರುತ್ತಲೇ ಬಸವರಾಜ ಹೊರಟ್ಟಿಗೆ ಟಿಕೆಟ್ ಕೊಟ್ಟರು. ಇದರಿಂದ ನನಗೆ ಮನಸ್ಸಿಗೆ ಬೇಜಾರಾಗಿದೆ. ಹೀಗಾಗಿ ಕಾಂಗ್ರೆಸ್ ಸೇರಿದ್ದೀನಿ ಎಂದರು.