ಹುಬ್ಬಳ್ಳಿ: ಉರಿಗೌಡ ನಂಜೇಗೌಡ ಧರ್ಮದ ಉಳುವಿಗಾಗಿ ಮತ್ತು ಹಿಂದೂಗಳ ನರಮೇಧ ಖಂಡಿಸಿ ಹೋರಾಟ ಮಾಡಿದವರು. ಉರಿಗೌಡ ನಂಜೇಗೌಡ ಬಗ್ಗೆ ನಮ್ಮ ಕರ್ನಾಟಕಕ್ಕೆ ಹಾಗೂ ನಮ್ಮ ಸಮಾಜಕ್ಕೆ ಹೆಮ್ಮೆ ಇದೆ. ಕೊಡವರ ನರಮೇಧ ಮಾಡಿದ ಮತ್ತು ಹಿಂದೂಗಳನ್ನ ಕೊಂದು ಹಾಕಿದ ಕನ್ನಡ ವಿರೋಧಿ ಟಿಪ್ಪು. ಅಂತವರ ವಿರುದ್ದ ಸೆಟೆದು ನಿಂತಿದ್ದು ಉರಿಗೌಡ ನಂಜೇಗೌಡ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇನ್ನೂ ಸುಮರ್ಣ ಮಂಡ್ಯ ಪುಸ್ತಕವನ್ನು 2006 ರಲ್ಲಿ ದೇವೆಗೌಡ ಬಿಡುಗಡೆ ಮಾಡಿದ್ರು.ಇದನ್ನ ದೇಜೇಗೌಡರು ಬರೆದಿದ್ದಾರೆ. ಇದೊಂದು ಸಂಶೋಧನಾತ್ಮಕ ಗ್ರಂಥ. ಉರಿಗೌಡ ನಂಜೇಗೌಡ ಹೋರಾಟ ಇದರಲ್ಲಿ ದಾಖಲಾಗಿದೆ. ಪುಸಕ್ತ ಬಿಡುಗಡೆ ಸಂದರ್ಭದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು. ಅವತ್ತು ಕುಮಾರಸ್ವಾಮಿ ಮಾತಾಡಲಿಲ್ಲ. ಇವತ್ತು ಅವರ ಹೋರಾಟ ಹೇಳಿದರೆ, ಕಾಂಗ್ರೆಸ್ ಜೆಡಿಎಸ್ ವೋಟ್ ಬ್ಯಾಂಕ್ ಗಾಗಿ ಮಾತನಾಡುತ್ತಿದ್ದಾರೆ. ಇದರಲ್ಲಿ ಕುಮಾರಸ್ವಾಮಿ, ಸಿದ್ದರಾಮಯ್ಯ ರಾಜಕಾರಣ ಮಾಡ್ತೀದಾರೆ ಎಂದು ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉರಿಗೌಡ ನಂಜೇಗೌಡ ಸಮಾಜದ ರಕ್ಷಣೆಗಾಗಿ ಹೋರಾಟ ಮಾಡಿದವರು. ಇದಕ್ಕಾಗಿ ನಮಗೆ ಹೆಮ್ಮೆ ಇದೆ ಎಂದರು.